ಸೂರಿಕುಮೇರು: ಎಸ್‌ವೈಎಸ್ ನಿಂದ ಅನುಪಯುಕ್ತ ವಸ್ತುಗಳ ಸಂಗ್ರಹ ಕಾರ್ಯಕ್ರಮ
ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ನಡೆಯುವ ಅಲ್ ಅರ್ಖಮಿಯ್ಯ ಏಕದಿನ ಕ್ಯಾಂಪ್ ಸಹಾಯಾರ್ಥ “ಸಹಾಯದಿಂದ ಸಮೃದ್ಧಿ” ಧ್ಯೇಯ ವಾಕ್ಯದಡಿ ನಡೆಯುತ್ತಿರುವ ಅನುಪಯುಕ್ತ ವಸ್ತುಗಳ ಸಂಗ್ರಹ ಅಭಿಯಾನದ ಕಾರ್ಯಕ್ರಮವು ಎಸ್‌ವೈಎಸ್ ಸೂರಿಕುಮೇರು ಯುನಿಟ್ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ ಕೆದಿಲ ಇದರ ಪ್ರೊಫೆಸರ್ ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸಖಾಫಿ ಮಂಜನಾಡಿ ದುಆ ನೆರವೇರಿಸಿದರು,ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರುಗಳಾದ ಯೂಸುಫ್ ಹಾಜಿ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು ಶುಭಹಾರೈಸಿದರು,ಮುಈನುದ್ದೀನ್ ಸೂರಿಕುಮೇರು ಉಪಸ್ಥಿತರಿದ್ದರು, ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.