ಬಜೆಟ್: ನರೇಗಾ ಯೋಜನೆಗೆ ಅನುದಾನ ಕಡಿತ..!
ಗ್ರಾಮೀಣ ಜನರಿಗೆ ಉದ್ಯೋಗದ ಖಾತ್ರಿ ನೀಡುವ ಗ್ರಾ. ಪಂ ವ್ಯಾಪ್ತಿಯಲ್ಲಿ ವಿಶೇಷ ಅಭಿವೃದ್ಧಿಗೆ ಕಾರಣವಾಗಿರುವ ಮಹತ್ವದ ‘ನರೇಗಾ‘ ಯೋಜನೆಗೆ 2023–24ರ ಬಜೆಟ್‌ನಲ್ಲಿ ಅನುದಾನ ಕಡಿತವಾಗಿದೆ.
ನರೇಗಾ ಯೋಜನೆಗೆ ರೂ.60 ಸಾವಿರ ಕೋಟಿ ಹಂಚಿಕೆಯಾಗಿದ್ದು ಇದು ಕಳೆದ ಹಣಕಾಸು ವರ್ಷದ ಪರಿಷ್ಕೃತ ಅಂದಾಜು ವೆಚ್ಚಕ್ಕಿಂತ ಶೇ 32ರಷ್ಟು ಕಡಿಮೆಯಾಗಿದೆ.
ನರೇಗಾ ಯೋಜನೆಗೆ 2022–23ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ರೂ.73 ಸಾವಿರ ಕೋಟಿ ಹಂಚಿಕೆ ಮಾಡಲಾಗಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ, ಈ ಮೊತ್ತ ನಂತರ ರೂ.89,400 ಕೋಟಿಗೆ ಏರಿಕೆಯಾಗಿತ್ತು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಕನಿಷ್ಠ 100 ದಿನ ಉದ್ಯೋಗದ ಖಾತ್ರಿ ನೀಡಲಾಗುತ್ತದೆ. ಈ ಯೋಜನೆಯಡಿ ಮೂರನೇ ಒಂದರಷ್ಟು ಉದ್ಯೋಗವನ್ನು ಮಹಿಳೆಯರಿಗೆ ನೀಡುವುದು ಕಡ್ಡಾಯವಾಗಿದೆ.