ಕಾಂಗ್ರೆಸ್ ಈಗ ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಗೊತ್ತೇ..?
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಈಗ ನಾಲ್ಕನೇ ರಾಜ್ಯದ ಅಧಿಕಾರದ ಗದ್ದುಗೆಗೇರುತ್ತಿದೆ.

ಕಾಂಗ್ರೆಸ್ ಪಕ್ಷ ಹಿಮಾಚಲಪ್ರದೇಶ, ಚತ್ತೀಸ್‌ಗಢ, ರಾಜಸ್ಥಾನದಲ್ಲಿ ಅಧಿಕಾರದಲ್ಲಿದೆ. ಈಗ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲಿದ್ದು ಇದರೊಂದಿಗೆ ಕಾಂಗ್ರೆಸ್‌ಗೆ ನಾಲ್ಕು ರಾಜ್ಯದಲ್ಲಿ ಸ್ವತಂತ್ರ ಅಧಿಕಾರ ಸಿಕ್ಕಿದಂತಾಗಿದೆ.
ತಮಿಳುನಾಡು, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಪಾಲುದಾರ ಪಕ್ಷವಾಗಿ ಅಧಿಕಾರವನ್ನು ಹಂಚಿಕೊಂಡಿದೆ.