ಸುಳ್ಯ: ಕಾರು ಅಪಘಾತ, ತಾಯಿ ಮಗಳು ಸ್ಥಳದಲ್ಲೇ ಮೃತ್ಯು
ಸುಳ್ಯ ಕಾಸರಗೋಡು ಗಡಿ ಭಾಗವಾದ ಪರಪೆ ಎಂಬಲ್ಲಿ ಕಾರು ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಮೃತಪಟ್ಟು ಉಳಿದ ನಾಲ್ವರು ಗಾಯಗೊಂಡಿರುವ ಘಟನೆ ಇದೀಗ ವರದಿಯಾಗಿದೆ.
ಸುಳ್ಯ ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬುವರ ಪುತ್ರಿ ಶಾಹಿನ (28 ವರ್ಷ) ಮತ್ತು ಆಕೆಯ ಪುತ್ರಿ ಶಜ್ಹಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಶಾಹಿನಾ ರವರು ಗಾಳಿಮುಖದ ತಮ್ಮ ಪತಿಯ ಮನೆಯಿಂದ ಸುಳ್ಯಕ್ಕೆ ಬರುವ ಸಂದರ್ಭ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಉಳಿದ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ