ಸಮಾಜ ಸೇವಕ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸೇವಾ ರತ್ನ ಪ್ರಶಸ್ತಿ
ಆಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ವತಿಯಿಂದ ಉದ್ಯಮಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸಮಾಜ ಸೇವೆಗಾಗಿ ರಾಜ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಮ್ಮದ್ ಕುಕ್ಕುವಳ್ಳಿಯವರನ್ನು ಶಾಲು ಹೊದಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮಹಮ್ಮದ್ ಕುಕ್ಕುವಳ್ಳಿ ಅವರು ಅನೇಕ ವರ್ಷಗಳಿಂದ ಬಡವರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದು ಹಲವಾರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಮನೆ ದುರಸ್ತಿ ಸೇರಿದಂತೆ ವಿವಿಧ ನೆರವನ್ನು ನೀಡುತ್ತಾ ಬಂದಿದ್ದಾರೆ.