ಕರಾವಳಿರಾಜ್ಯ

ತಳವಾರು ದಾಳಿಗೆ ಯತ್ನ ಪ್ರಕರಣ …!
ಪೇಚಿಗೆ ಸಿಲುಕಿದರೇ ಬೆಳ್ತಂಗಡಿ ಶಾಸಕ ಪೂಂಜಾ…!?


ಪುತ್ತೂರು; ತಡ ರಾತ್ರಿ ವೇಳೆ ಕಾರಿನಲ್ಲಿ ಓವರ್‌ಟೆಕ್ ಮಾಡಿಕೊಂಡು ಬಂದ ವ್ಯಕ್ತಿ ತಳವಾರು ಬೀಸಿ ಕೊಲೆಗೆ ಯತ್ನ ನಡೆಸಿದ್ದ ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಹೇಳಿಕೆ ಅವರನ್ನು ಪೇಚಿಗೆ ಸಿಲುಕಿಸುವಂತೆ ಮಾಡಿತೇ ಎಂಬ ಅನುಮಾನ ಅವರ ಅಪ್ತ ವಲಯದಲ್ಲಿ ಕೇಳಿ ಬಂದಿದೆ.


ಹೇಳಬಾರದ್ದನ್ನು ಹೇಳಿ, ಕೇಳ ಬಾರದ್ದನ್ನು ಕೇಳಿ ಕೆಲವರು ಎಡವುಂಟು ಅದೇ ಅನುಭವ ದಾಳಿ ವಿಚಾರದಲ್ಲಿ ಪೂಂಜಾರಿಗೆ ಆಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ತಡರಾತ್ರಿ ಮಂಗಳೂರಿನಿಂದ ಬರುವ ವೇಳೆ ಫರಂಗಿಪೇಟೆಯ ಬಳಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಕಾರು ಚಲಾಯಿಸುತ್ತಲೇ ತಳವಾರು ಝಳಪಿಸಿ ಕೊಲೆಗೆ ಯತ್ನ ನಡೆಸಿದ್ದಾನೆ ಎಂಬ ಶಾಸಕರ ಆರೋಪ ಸಾಧಾರಣ ಆರೋಪವಲ್ಲ. ಒಂದು ವೇಳೆ ತಳವಾರು ಬೀಸಿದ್ದರೆ ಅದೊಂದು ದೊಡ್ಡ ವಿಚಾರವೇ ಆಗಿದೆ.

ಜನರಿಂದ ಅಯ್ಕೆಯಾದ ಓರ್ವ ಜನಪ್ರತಿನಿಧಿಯನ್ನು ಕೊಲೆ ಮಾಡಲು ಯತ್ನಿಸುವುದು ಮಹಾ ಅಪರಾಧವಾಗಿದೆ ಎಂಬುದು ಜನ ಸಾಮಾನ್ಯನಿಗೂ ಗೊತ್ತಿದೆ. ಶಾಸಕರು ಮಾಡಿದ ಆರೋಪದಿಂದ ಅವರ ಕ್ಷೇತ್ರದ ಮತದಾರ ಮಾತ್ರವಲ್ಲ ಕರ್ನಾಟಕ ಬಹುತೇಕ ಮಂದಿಗೂ ಆಘಾತವಾಗಿತ್ತು. ಶಾಸಕರನ್ನೇ ತಳವಾರು ಝಳಪಿಸಿ ಬೆದರಿಸುವ ಮಂದಿ ಮಂಗಳೂರಿನಲ್ಲಿದ್ದಾರಲ್ವ ಎಂಬ ಆತಂಕವೂ ಶುರುವಾಗಿತ್ತು.

ಘಟನೆಯ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿದ ಮಾಹಿತಿ ಪ್ರಕಾರ ಯಾರೂ ತಳವಾರು ಝಳಪಿಸಿಲ್ಲ ಮತ್ತು ಓವರ್ ಟೇಕ್ ಮಾಡುವ ವಿಚಾರದಲ್ಲಿ ಶಾಸಕರ ಕಾರಿನ ಚಾಲಕ ಮತ್ತು ಇನ್ನೊಂದು ಕಾರಿನ ವ್ಯಕ್ತಿ ನಡುವೆ ವಾಗ್ವಾದ ನಡೆದಿದೆ ಅದೂ ಅಲ್ಲದೆ ಆ ವ್ಯಕ್ತಿ ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳವರೂ ಅಲ್ಲ ಎಂಬ ಪೊಲೀಸ್ ಮಾಹಿತಿ ಬಂದ ಬಳಿಕ ಶಾಸಕರು ಹೇಳಿದ್ದು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಶಾಸಕರು ಯಾಕೆ ಆರೀತಿ ಹೇಳಿಕ ಕೊಟ್ಟಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗಲಿಲ್ಲ.

ತಳವಾರು ಝಳಪಿಸಿದ ಬಳಿಕ ಶಾಸಕರಿಗೆ ಗನ್ ಮ್ಯಾನ್ ಭದ್ರತೆಯನ್ನು ನೀಡಲಾಗಿತ್ತು. ಘಟನೆ ಬೇರೆ ಕಡೆ ವಾಲುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಗನ್ ಮ್ಯಾನ್ ಬೇಡ ಎಂದು ಖುದ್ದು ಶಾಸಕರೇ ಅವರನ್ನು ವಾಪಸ್ ಕಳುಹಿಸಿದ್ದಾರೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಆ ಘಟನೆಗೆ ಸಾಕ್ಷಿ ಎಂಬಂತಿದೆ.

Leave a Reply

Your email address will not be published. Required fields are marked *

error: Content is protected !!