ಧರ್ಮಸ್ಥಳ: ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ
ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಖಾಸಗಿ ಲಾಡ್ಜ್ ನಲ್ಲಿ ರೂಂ ಮಾಡಲು ಯತ್ನಿಸುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ ಘಟನೆ ಇಂದು ಜ.25 ರಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಮುಸ್ಲಿಂ ವ್ಯಕ್ತಿ ಮತ್ತು ವಿವಾಹಿತ ಹಿಂದೂ ಮಹಿಳೆ ಎಂಬವರು ಐಡಿ ಕಾರ್ಡ್ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದರು ಎನ್ನಲಾಗಿದ್ದು ಅನ್ಯಕೋಮಿನ ಜೋಡಿ ಆಗಿದ್ದರಿಂದ ಲಾಡ್ಜ್ ಮಾಲೀಕರು ರೂಂ ನೀಡದೆ ವಾಪಸ್ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನರಿತ ಹಿಂದೂ ಸಂಘಟನೆ ಕಾರ್ಯಕರ್ತರು ಜ.25 ರಂದು ಬೆಳಗ್ಗೆ ಇಬ್ಬರನ್ನು ಹಿಡಿದು ವಿಚಾರಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.