ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಖಾತೆಯಿಂದ ಬರೋಬ್ಬರಿ 100 ಕೋಟಿ ರೂ ಮಾಯ..!
ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಖಾತೆಯಿಂದ ಬರೋಬ್ಬರಿ 100 ಕೋಟಿ ರೂ. ಮಾಯವಾಗಿದೆ. ಜಮೈಕಾದ ಹೂಡಿಕೆ ಸಂಸ್ಥೆಯೊಂದರಲ್ಲಿ ತಮ್ಮ ಖಾತೆಯಿಂದ ಕಣ್ಮರೆಯಾದ ನೂರು ಕೋಟಿ ರೂ. ಗೂ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಲು ಒಲಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಪ್ರಯತ್ನಿಸುತ್ತಿದ್ದು, ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಪ್ರಕರಣವನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.

ಎಸ್.ಎಸ್.ಎಲ್ ಕಂಪೆನಿ ತನ್ನ ಹೇಳಿಕೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಕೊಂಡಿದೆ. ಶೇರ್ ಗಳನ್ನು ಸುರಕ್ಷಿತಗೊಳಿಸಲಾಗಿ ಪ್ರೋಟೋಕಾಲ್‌ಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದೆ.
ಜಮೈಕಾ ಕಾನ್ ಸ್ಟಾಬ್ಯುಲರಿ ಫೋರ್ಸ್ ತನ್ನ ವಂಚನೆ ಮತ್ತು ಹಣಕಾಸು ತನಿಖಾ ತಂಡಗಳು SSL ನಲ್ಲಿನ ಮೋಸದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಇತರರ ನಡುವೆ ಉಸೇನ್ ಬೋಲ್ಟರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಉಸೇನ್ ಬೋಲ್ಟ್ ತಮ್ಮ ಖಾತೆಯಿಂದ ಬರುತ್ತಿದ್ದ ಬಡ್ಡಿ ಹಣದ ಆಧಾರದ ಮೇಲೆ ತಮ್ಮ ಹಾಗೂ ತಮ್ಮ ಪೋಷಕರ ಜೀವನ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.