ಪತ್ರಕರ್ತ ಪುತ್ತೂರಿನ ಇಬ್ರಾಹಿಂ ಖಲೀಲ್ ‘ಗಿರಿಧರ’ ಪ್ರಶಸ್ತಿಗೆ ಆಯ್ಕೆ
ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಪುತ್ತೂರು ಸುದ್ದಿ ಬಿಡುಗಡೆ ದಿನ ಪತ್ರಿಕೆ ವರದಿಗಾರರಾಗಿದ್ದ ಇಬ್ರಾಹಿಂ ಖಲೀಲ್ ಅವರಿಗೆ ಗಿರಿಧರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2020ನೇ ವರ್ಷದಲ್ಲಿ ಪ್ರಕಟಗೊಂಡ ಅತ್ಯುತ್ತಮ ಅಪರಾಧ ವರದಿಗೆ ಗಿರಿಧರ ಪ್ರಶಸ್ತಿ ನೀಡಲಾಗಿದೆ.
ಇಬ್ರಾಹಿಂ ಖಲೀಲ್ ಅವರು ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿದ್ದಾರೆ.
ಪ್ರಸ್ತುತ ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ವಿಡಿಯೋ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಜಯಪುರದಲ್ಲಿ ನಡೆಯುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.