Uncategorized

ಸಂಘಪರಿವಾರವನ್ನು ಪ್ರಶ್ನೆ ಮಾಡಿದ್ದ ಅಧಿಕಾರಿಯ ಅಮಾನತು ಖಂಡನೀಯ:ಎಸ್‌ಡಿಪಿಐ



ಪುತ್ತೂರು: ಭಜನೆ ಮಾಡುವವರನ್ನು ನಿಂದಿಸಿದ್ದಾರೆಂದು ಆರೋಪ ಹೊರಿಸಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರವರನ್ನು ಸೇವೆಯಿಂದ ಅಮಾನತುಗೊಳಿಸಿರುವುದು ಖಂಡನೀಯ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಕೆಳ ವರ್ಗದ ಹೆಣ್ಣು ಮಕ್ಕಳ ಮೇಲೆ ಕಾಳಜಿ ವಹಿಸಿ ಹೇಳಿಕೆ ನೀಡಿದ್ದ ಮತ್ತು ತನ್ನ ಮನೆ ಅಂಗಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಸಂಘಪರಿವಾರವನ್ನು ಪ್ರಶ್ನೆ ಮಾಡಿದ್ದ ಅಧಿಕಾರಿಯ ಅಮಾನತು ಮಾಡಿರುವ ಸರ್ಕಾರದ ನಡೆಯು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.


ಸಂಘಪರಿವಾರದ ಸಂಚು, ಷಡ್ಯಂತರ ಹಾಗೂ ಅನಾಗರಿಕತೆಯನ್ನು ಪ್ರಶ್ನಿಸುವವರನ್ನು ಸರ್ಕಾರ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸಿ ಸಂಘಪರಿವಾರದ ದುಷ್ಕೃತ್ಯಗಳಿಗೆ ಸರ್ಕಾರವೇ ನೇರ ಪ್ರೇರಣೆ ನೀಡುತ್ತಿದೆ.
ಸಂಜೀವ ಪೂಜಾರಿರವರ ಮನೆ ಅಂಗಳದಲ್ಲಿ ಬಾಂಬ್ ಸ್ಪೋಟ ನಡೆಸಿ UAPA ಕಾಯ್ದೆ ಹಾಕಿ NIAತನಿಖೆ ಒಪ್ಪಿಸಬೇಕಾದ ಪ್ರಕರಣಕ್ಕೆ ಸಮಾನವಾದ ಅಪರಾಧ ಸಂಘಪರಿವಾರ ಕಾರ್ಯಕರ್ತರು ಎಸಗಿದ್ದರು ಅವರ ವಿರುದ್ಧ ಯವುದೇ ಕ್ರಮ ಕೈಗೊಳ್ಳದೆ ಸಂಜೀವ ಪೂಜಾರಿಯವರ ವಿರುದ್ಧ ಕ್ರಮ ಕೈಗೊಂಡಿರುವ ನಡೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಸಂಜೀವ ಪೂಜಾರಿರವರ ಅಮಾನತು ಆದೇಶವನ್ನು ಕೂಡಲೇ ರದ್ದುಪಡಿಸಿ ಅವರ ಮನೆ ಮುಂದೆ ಬಾಂಬ್ ಸ್ಪೋಟ ನಡೆಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ UAPA ಕಾಯ್ದೆ ಅಡಿ ಪ್ರಕರಣ ದಾಖಲಿಸಿ NIA ಗೆ ವಹಿಸಬೇಕೆಂದು ಇಬ್ರಾಹಿಂ ಸಾಗರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!