ಮುಂಡೂರು: ಯುವತಿಯ ಬರ್ಬರ ಕೊಲೆ ಪ್ರಕರಣ: ಓರ್ವ ಪೊಲೀಸ್ ವಶಕ್ಕೆ
ಪುತ್ತೂರು: ಮನೆಗೆ ನುಗ್ಗಿ ಯುವತಿಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮುಂಡೂರು ಗ್ರಾಮದ ಕಂಪದಲ್ಲಿ ಜ.17ರಂದು ನಡೆದಿದ್ದು ಘಟನೆಗೆ ಸಂಬಂಧಿಸಿ ಯುವಕನೋರ್ವನನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಂಪದ 22 ವರ್ಷದ ಯುವತಿ ಜಯಶ್ರೀ ಎಂಬವರನ್ನು ಯುವಕನೋರ್ವ ಚೂರಿಯಿಂದ ಇರಿದು ಕೊಲೆ ಮಾಡಿದ್ದ.
ಯಾಕೆ ಕೊಲೆ ನಡೆಯಿತು ಎನ್ನುವುದು ತಿಳಿದು ಬಂದಿಲ್ಲ.
ಘಟನೆಗೆ ಸಂಬಂಧಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಮೊಬೈಲ್ ಕರೆಯ ಆಧಾರದಲ್ಲೂ ತನಿಖೆ ಕೇಂದ್ರೀಕೃತಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.