ಕ್ರೈಂಜಿಲ್ಲೆ

ಬಜರಂಗದಳ ಮುಖಂಡನ ಮೇಲೆ ತಳವಾರು ದಾಳಿಗೆ ಯತ್ನ ಪ್ರಕರಣ: ಸಮೀರ್’ನ ಸಹೋದರಿಯನ್ನು ಸುನಿಲ್ ಚುಡಾಯಿಸುತ್ತಿದ್ದುದೇ ದಾಳಿಗೆ ಕಾರಣ: ಪೊಲೀಸ್ ವರಿಷ್ಠಾಧಿಕಾರಿಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಸುನಿಲ್ ಮೇಲೆ ತಲವಾರು ದಾಳಿ ಯತ್ನಕ್ಕೆ ಕಾರಣ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಆರೋಪಿ ಸಮೀರ್’ನ ಸಹೋದರಿಗೆ ಸುನಿಲ್ ಚುಡಾಯಿಸುತ್ತಿದ್ದುದೇ ಆತನ ಮೇಲಿನ ತಲವಾರು ದಾಳಿಗೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತ ಸುನಿಲ್ ಕಳೆದ ನಾಲ್ಕೈದು ತಿಂಗಳುಗಳಿಂದ ಸಮೀರ್ ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ನಡೆದುಕೊಂಡು ಹೋಗುತ್ತಿದ್ದಾಗ ಚುಡಾಯಿಸುತ್ತಿದ್ದ. ಈ ವಿಷಯದಲ್ಲಿ ಸಮೀರ್ ಮತ್ತು ಸುನಿಲ್ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ತಂಗಿಯ ವಿಷಯಕ್ಕೆ ಬಾರದಂತೆ ಸುನಿಲ್ ಗೆ ಸಮೀರ್ ಎಚ್ಚರಿಕೆಯನ್ನೂ ನೀಡಿದ್ದ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.

ಸುನಿಲ್, ಸಮೀರ್ ನ ತಂಗಿಯ ಮೊಬೈಲ್ ಸಂಖ್ಯೆಯನ್ನು ಕೇಳಿದ್ದ. ಈ ವಿಷಯದಲ್ಲಿ ಅವರಿಬ್ಬರು ಜಗಳವಾಡಿಕೊಂಡಿದ್ದರು.

ಸುನಿಲ್ ನ ಕಿರುಕುಳ ಹೆಚ್ಚಾಗಿದ್ದರಿಂದ ಸಮೀರ್ ಕಳೆದ ಭಾನುವಾರ ರಾತ್ರಿ ಬಿ.ಎಚ್.ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸುನೀಲ್ ಗೆ ತಲವಾರು ದಾಳಿ ನಡೆಸಲು ಯತ್ನಿಸಿದ್ದು, ಆದರೆ ಗುರಿ ತಪ್ಪಿದ್ದರಿಂದ ಸುನಿಲ್ ಬಚಾವಾಗಿದ್ದಾನೆ. ಸುನಿಲ್ ಮೇಲಿನ ವೈಯಕ್ತಿಕ ದ್ವೇಷವೇ ಹಲ್ಲೆಗೆ ಕಾರಣ ಎಂದವರು ತಿಳಿಸಿದರು.

ಸಾಗರ ನಗರ ಬಜರಂಗದಳದ ಸಹ ಸಂಚಾಲಕನಾಗಿರುವ ಸುನಿಲ್ ಮೇಲಿನ ದಾಳಿಯನ್ನು ಖಂಡಿಸಿ ಜ.10ರಂದು ಸಾಗರ ಪಟ್ಟಣದಲ್ಲಿ ಬಜರಂಗದಳ ಬಂದ್ ಗೆ ಕರೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!