ಆರ್.ಸಿ.ಬಿ ವಿರುದ್ದ ನಾನು ಆಡಿದ್ದರೆ… ಪಂತ್ ಹೇಳಿದ್ದೇನು?
ಆರ್.ಸಿ.ಬಿ ವಿರುದ್ದದ ನಾನು ಮೈದಾನದಲ್ಲಿದ್ದರೆ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದೆವು’ ಎಂದು ಮಂಗಳವಾರ ಲಕ್ನೋ ವಿರುದ್ಧ 19 ರನ್ ಗಳ ಜಯ ಸಾಧಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಹೇಳಿದ್ದಾರೆ.

ಒಂದು ಪಂದ್ಯದ ಅಮಾನತು ಐಪಿಎಲ್ ಪ್ಲೇಆಫ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ಥಾನವನ್ನು ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಪರಿಗಣಿಸುವುದಾಗಿ ರಿಷಭ್ ಪಂತ್ ಅಸಮಾಧಾನ ಹೊರ ಹಾಕಿದ್ದಾರೆ.
ನಿಧಾನ ಗತಿಯ ಓವರ್ ರೇಟ್ ಕಾರಣಕ್ಕೆ ಪಂತ್ ಅವರು ಒಂದು ಪಂದ್ಯದಿಂದ ಅಮಾನತುಗೊಂಡ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಿಂದ ಹೊರಗುಳಿದಿದ್ದರು. ಪಂದ್ಯದಲ್ಲಿ ಆರ್ ಸಿಬಿ 47 ರನ್ ಜಯ ಸಾಧಿಸಿತ್ತು. ಇದು ಡೆಲ್ಲಿ ಪ್ಲೇ ಆಫ್ ಸಾಧ್ಯತೆಗೆ ದೊಡ್ಡ ಆಘಾತ ನೀಡಿತ್ತು.