ಕೌಡಿಚ್ಚಾರು: ಜೆರಾಕ್ಸ್ ಅಂಗಡಿಯಿಂದ ಕಳವು
ಪುತ್ತೂರು: ಕೌಡಿಚ್ಚಾರಿನಲ್ಲಿರುವ ಜೆರಾಕ್ಸ್ ಅಂಗಡಿಯಿಂದ ಸಾವಿರಾರು ರೂಪಾಯಿ ಕಳವುಗೈದಿರುವ ಘಟನೆ ಜ.1ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕೌಡಿಚ್ಚಾರಿನಲ್ಲಿರುವ ವಿಶ್ವನಾಥ ಗೌಡ ಎಂಬವರಿಗೆ ಸೇರಿದ ಜೆರಾಕ್ಸ್ ಅಂಗಡಿಯಿಂದ ಕಳವಾಗಿದ್ದು, ಅವರು ಬೆಳಗ್ಗೆ ಅಂಗಡಿಗೆ ಬಂದಾಗ ಅಂಗಡಿಯ ಎದುರಿನ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿತ್ತು.
ಅಂಗಡಿ ಒಳಗೆ ನೋಡಿದಾಗ ಡವರ್‌ನಲ್ಲಿದ್ದ ಸುಮಾರು 20 ಸಾವಿರ ನಗದು ಮತ್ತು ಮೊಬೈಲ್ ಕಳವಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.