ಫೆಬ್ರವರಿ 24, 25: ಕಾವು ಬದ್ರಿಯಾ ಮಜ್ಲೀಸ್ ದಶ ವಾಷಿಕ ಕಾರ್ಯಕ್ರಮ: ಪೂರ್ವಭಾವಿ ಸಭೆ, ಸ್ವಾಗತ ಸಮಿತಿ ರಚನೆ
ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಇದರ ಬದ್ರಿಯಾ ಮಜ್ಲೀಸ್ ದಶವಾರ್ಷಿಕ, ಸನದು ದಾನ ಮಹಾ ಸಮ್ಮೇಳನ, ಸಯ್ಯಿದ್ ಮುಹಮ್ಮದ್ ಹದ್ದಾದ್ ತಂಗಳ್ ರವರ ನಾಲ್ಕನೇ ಆಂಡ್ ನೇರ್ಚೆ ಕಾರ್ಯಕ್ರಮ 2023 ಫೆಬ್ರವರಿ 24 ಮತ್ತು 25 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಮತ್ತು ಸ್ವಾಗತ ಸಮಿತಿ ರಚನೆ ಡಿ.30 ರಂದು ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವು ಬದ್ರಿಯಾ ಎಜುಕೇಶನಲ್ ಸೆಂಟರ್ ಇದರ ಸ್ಥಾಪಕ ಅಧ್ಯಕ್ಷ ಸೈಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ವಹಿಸಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಜನರಲ್ ಮ್ಯಾನೇಜರ್ ಇಬ್ರಾಹಿಂ ಸಅದಿ ಮಾಣಿ ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಹಿರಿಯ ಧಾರ್ಮಿಕ ಮುಖಂಡರುಗಳಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಹಸನ್ ಸಖಾಫಿ ಬೆಳ್ಳಾರೆ, ಅಬ್ದುಲ್ಲಾ ಅಹ್ಸನಿ ಮಾಡನ್ನೂರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಕೆಲವು ಕ್ರಿಯಾ ಯೋಜನೆಗಳನ್ನು ರೂಪಿಸಲಾಯಿತು. ಬಳಿಕ ಸ್ವಾಗತ ಸಮಿತಿ ರಚಿಸಲಾಯಿತು.
ಚೇರ್ಮೆನ್ ಆಗಿ ಇಬ್ರಾಹಿಂ ಸಅದಿ ಮಾಣಿ ,ಕನ್ವೀನರಾಗಿ ಅಬೂ ಶಝ ಉಸ್ತಾದ್, ಫೈನಾನ್ಸ್ ಕನ್ವೀನರಾಗಿ ಅಬ್ದುಲ್ ರಹಿಮಾನ್ ಶಾಲಿಮಾರ್, ವೈಸ್ ಚೇರ್ಮನ್ ಆಗಿ ಸ್ವಲಾವುದ್ದೀನ್ ಸಖಾಫಿ, ಹಸನ್ ಸಖಾಫಿ ಬೆಳ್ಳಾರೆ, ಅಬ್ದುಲ್ಲಾ ಅಹ್ಸನಿ, ಅಬ್ದುಲ್ ರೆಹಮಾನ್ ಸುಣ್ಣಮೂಲೆ, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ಲ ಕಾವು, ಅಬ್ಬಾಸ್, ಜೊತೆ ಕನ್ವೀನರಾಗಿ ಹಮೀದ್ ಸುಣ್ಣಮೂಲೆ, ಶಫೀಕ್ ಮಾಸ್ಟರ್, ಹಸೈನಾರ್ ಜಯನಗರ, ಯೂಸುಫ್ ಕಾವು, ತಾಜುದ್ದೀನ್ ಮಾಡನ್ನೂರು, ಅಬ್ಬಾಸ್ ಅಡ್ಕಾರ್, ಉಬೈದ್ ಕಡಬ, ಹಾಗೂ 48 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಚಾರ ಸಮಿತಿ ಚೇರ್ಮನ್ ಅಬ್ದುಲ್ಲಾ ಅಹ್ಸನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭೆಯಲ್ಲಿ ನೂರಾರು ಮುಖಂಡರುಗಳು ಭಾಗವಹಿಸಿದ್ದರು.