ಕರಾವಳಿಕ್ರೈಂ

ಪಣಂಬೂರು ಬೀಚ್ ನಲ್ಲಿ ಚಿನ್ನಾಭರಣಗಳಿದ್ದ  ಬ್ಯಾಗ್ ಕಳ್ಳತನ: ಪ್ರಕರಣ ಬೇಧಿಸಿದ ಪೊಲೀಸರು

ಮಂಗಳೂರು: ನ.24ರಂದು ಸ್ವಾತಿ ನಂದಿಪಳ್ಳಿ (24 ವ) ಎಂಬವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿರವರೊಂದಿಗೆ ಬೆಳಿಗ್ಗೆ  ಪಣಂಬೂರು ಬೀಚಿಗೆ ಬಂದವರು ತನ್ನ  ಚಿನ್ನದ 12 ಗ್ರಾಮ್ ತೂಕದ ಚೈನ್, 2 ಗ್ರಾಮ್ ತೂಕದ ಲಾಕೇಟ್,  ತಲಾ 2 ಗ್ರಾಮ್ ತೂಕದ ಎರಡು ಉಂಗುರ ಮತ್ತು 4 ಗ್ರಾಮ್ ತೂಕದ ಕಿವಿ ಓಲೆ ಹಾಗೂ ತನ್ನ ಬಾಬ್ತು Realme ಕಂಪೆನಿಯ ಮೊಬೈಲ್ ಪೋನ್-1, ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ರವರ Samsung S24 Ultra  ಮೊಬೈಲ್ ಪೋನ್-1 ಗಳನ್ನು ಕಪ್ಪು ಬಣ್ಣದ ಬ್ಯಾಗಿನಲ್ಲಿ ಹಾಕಿ ಸಮುದ್ರ ದಡದಲ್ಲಿ ಇರಿಸಿ, ನೀರಿನಲ್ಲಿ ಈಜಾಡಲು ಸಮುದ್ರಕ್ಕೆ ಇಳಿದಿದ್ದು, ನಂತರ 11.50 ಗಂಟೆಯ ಸುಮಾರಿಗೆ  ಬಂದು ನೋಡಿದಾಗ ಬ್ಯಾಗ್ ಕಳವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 3 ಲಕ್ಷದ 33 ಸಾವಿರ ರೂಪಾಯಿಗಳು ಆಗಿತ್ತು. ಸದ್ರಿ  ಸ್ವತ್ತುಗಳನ್ನು ಬ್ಯಾಗ್ ಸಮೇತವಾಗಿ ಯಾರೋ ಕಳ್ಳತನ ಮಾಡಿರುವುದಾಗಿ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.26ರಂದು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಪ್ರಕರಣದಲ್ಲಿ ಭಾಗಿಯಾದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನ ಕಡೆಯಿಂದ ಕಳವಾದ 3 ಲಕ್ಷದ 33 ಸಾವಿರ ರೂಪಾಯಿ ಮೌಲ್ಯದ  ಎಲ್ಲಾ  ಸ್ವತ್ತುಗಳನ್ನು  ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇದಿಸುವಲ್ಲಿ ಮಂಗಳೂರು ನಗರದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಕೆ.ರವಿಶಂಕರ್ (ಅಪರಾಧ ಮತ್ತು ಸಂಚಾರ ವಿಭಾಗ) ಮತ್ತು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ. ಕೆ.  ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ  ಪೊಲೀಸ್ ನಿರೀಕ್ಷಕರಾದ ಪ್ರಮೋದ್  ಕುಮಾರ್   ಪಣಂಬೂರು ಪೊಲೀಸ್ ಉಪ ನಿರೀಕ್ಷಕರುಗಳಾದ  ಜ್ಷಾನಶೇಖರ , ಶ್ರೀಕಲಾ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಸಯ್ಯದ್  ಇಮ್ತಿಯಾಜ್, ಪಿ.ಸಿ.ಗಳಾದ ರಾಕೇಶ್  ಮತ್ತು ಶರಣಬಸವ ರವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!