ಪುತ್ತೂರು: ಮುಕ್ವೆಯಲ್ಲಿ ಬೈಕ್, ರಿಕ್ಷಾ ಡಿಕ್ಕಿ-ಬೈಕ್ ಸವಾರ ಮೃತ್ಯು
ಪುತ್ತೂರು: ಆಟೋ ರಿಕ್ಷಾ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಡಿ.25ರಂದು ಮುಕೈ ಎಂಬಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಕೊಳಾಲ ಗ್ರಾಮದ ಹೆಗದಿಹಳ್ಳ ನಿವಾಸಿ ವೀರೇಶ(38ವ.) ಮೃತಪಟ್ಟ ಕಾರ್ಮಿಕ.

ನರಿಮೊಗರು ಸಮೀಪ ಬಾಲಕೃಷ್ಣ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಚಿತ್ರದುರ್ಗ ಜಿಲ್ಲೆಯ ಕಾರ್ಮಿಕರಾದ ವೀರೇಶ ಹಾಗೂ ರೆವನೀಶ್ ರವರು ಬೈಕ್ ನಲ್ಲಿ ಮಧ್ಯಾಹ್ನದ ವೇಳೆ ಪೇಟೆಗೆ ಬಂದು ಹಿಂತಿರುಗುವ ವೇಳೆ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ಎದುರಿನಿಂದ ಬಂದ ಆಟೋ ರಿಕ್ಷಾ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಸವಾರ ವೀರೇಶರವರಿಗೆ ತೀವ್ರ ಗಾಯವಾಗಿದ್ದು ಅವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಅವರು ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು. ಅಪಘಾತದಿಂದ ರಿಕ್ಷಾ ಚಾಲಕ ಗಣೇಶ ಗೌಡ ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕ ಗಂಗಾಧರ ನಾಯ್ಕ ಎಂಬವರಿಗೂ ಗಾಯಗಳಾಗಿದೆ. ಬೈಕ್ ಸಹ ಸವಾರ ರೆವನೀಶ್ ನೀಡಿದ ದೂರಿನಂತೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.