ಸುಳ್ಯ: ದಕ್ಷ ಅಧಿಕಾರಿಯಿಂದ ದಿಟ್ಟ ಕ್ರಮ,ಅಕ್ರಮ ಮರಳು ದಾಸ್ತಾನು ಮತ್ತು ಗಣಿಗಾರಿಕೆ ಕೇಂದ್ರಕ್ಕೆ ದಾಳಿ, ಮುಟ್ಟುಗೋಲು ನೈಜ ಕ್ರಮ ಸ್ವಾಗತಾರ್ಹ: ರಶೀದ್ ಜಟ್ಟಿಪಳ್ಳ
ಸುಳ್ಯ: ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸುದ್ದಿ ಯಾಗದೆ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಗಣಿಗಾರಿಕೆ ಪ್ರದೇಶದಕ್ಕೆ ದಾಳಿ ಮಾಡಿ ಮುಟ್ಟುಗೋಲು ಹಾಕಿ ಅಕ್ರಮ ಧಂದೆಯನ್ನು ಖುದ್ದಾಗಿ ಸುಳ್ಯ ತಹಶೀಲ್ದಾರ್ ಕು.ಅನಿತಾ ಲಕ್ಷ್ಮಿ ಬಯಲಿಗೆ ಎಳೆದಿರುವುದು ಸ್ವಾಗತಾರ್ಹ. ಬಹಳ ಆದಾಯ ತರುವ ಸರಕಾರಿ ಖನಿಜ ಸಂಪತ್ತು ಕೊಳ್ಳೆ ಹೊಡೆದವರ ನೈಜ ಮುಖ ಅನಾವರಣಗೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ ತಿಳಿಸಿದ್ದಾರೆ.
ಅಕ್ರಮ ದಂಧೆ ಕೇಂದ್ರಕ್ಕೆ ದಾಳಿಮಾಡಿ ಮುಟ್ಟುಗೋಲು ಹಾಕುವ ವಿಚಾರ
ಸುಲಭವಲ್ಲ, ಭಾರಿ ಒತ್ತಡ ಎದುರಿಸಬೇಕಾಗುತ್ತದೆ, ಆದರೂ ಅದನ್ನೆಲ್ಲಾ ಕೇರ್ ಮಾಡದೆ ತನ್ನ
ಅಧಿಕಾರವನ್ನು ಚಲಾಯಿಸಿ ಕ್ರಮ ಕೈಗೊಂಡಿರುವ ತಹಶೀಲ್ದಾರ್ ನಡೆ ಪ್ರಶಂಸನೀಯ. ಈ ಸಂದರ್ಭದಲ್ಲಿ ಜನತೆ ಅಧಿಕಾರಿಗಳ ಪರ ನಿಂತು, ಇನ್ನಷ್ಟು ಅಕ್ರಮಗಳು ಬಯಲಲಾಗುವ ಹಾಗೆ ಸಹಕಾರ ನೀಡಬೇಕು ಎಂದು ಅವರು ಮಾಧ್ಯಮ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.