Uncategorizedಕರಾವಳಿಕ್ರೈಂ

ಸುಳ್ಯ: ಬೆಳ್ಳಾರೆ ಉದ್ಯಮಿಯೋರ್ವರ ಅಪಹರಣ ಆರೋಪ: ಉದ್ಯಮಿಯ ತಾಯಿ, ಅತ್ತಿಗೆ ಆಸ್ಪತ್ರೆಗೆ ದಾಖಲು

ಸುಳ್ಯ ತಾಲೂಕಿನ ಬೆಳ್ಳಾರೆಯ ಯುವ ಉದ್ಯಮಿಯೋರವರನ್ನು ಸುಮಾರು ಎಂಟು ಮಂದಿಯ ತಂಡ ಮನೆಗೆ ನುಗ್ಗಿ ಅಪಹರಣ ಗೈದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.


ಬೆಳ್ಳಾರೆಯ ನವೀನ್ ಅಪಹರಣಕ್ಕೀಡಾದ ಉದ್ಯಮಿ. ಕೆ ಎಲ್ ನೋಂದಣಿಯ ಅಂಬ್ಯುಲೆನ್ಸ್ ವಾಹನದಲ್ಲಿ ಅವರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.


ಈ ವೇಳೆ ಮನೆಯಲ್ಲಿ ಇದ್ದ ನವೀನ್ ರವರ ತಾಯಿ ನೀರಾಜಾಕ್ಷಿ ಮತ್ತು ಅತ್ತಿಗೆ ಪ್ರಜ್ಞಾ ರವರ ಮೇಲೆ ಅಪಹಣಕಾರರು ಹಲ್ಲೆ ನಡೆಸಿದ್ದು, ಪ್ರಜ್ಞಾ ರವರು ಐದು ತಿಂಗಳ ಗರ್ಭಿಣಿಯಾಗಿದ್ದು ಅವರ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಅವರು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.


ಈ ಬಗ್ಗೆ ಮಾಧ್ಯಮದಾರರಿಗೆ ಮಾಹಿತಿ ನೀಡಿದ ನೀರಜಾಕ್ಷಿಯವರು ಅಪಹರಣಕಾರರಿಂದ ಮಗನನ್ನು ರಕ್ಷಣೆ ಮಾಡಲು ಮುಂದಾದಾಗ ಅಪಹರಣಕಾರರು ನಮ್ಮ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿ ತಲವಾರುಗಳನ್ನು ನಮ್ಮತ್ತ ಬೀಸಿದ್ದಾರೆ. ಅದರಿಂದ ಅಲ್ಪದರಲ್ಲಿ ನಾನು ಪಾರಾಗಿದ್ದು ಅವರಲ್ಲಿ ಓರ್ವ ಪ್ರಜ್ಞಾರರನ್ನು ನೆಲಕ್ಕೆ ದೂಡಿ ಹಾಕಿದ್ದು ಅವರ ಹೊಟ್ಟೆಯ ಭಾಗಕ್ಕೆ ನೋವಾಗಿದೆ ಎಂದು ತಿಳಿಸಿದ್ದಾರೆ.

ಯುವ ಉದ್ಯಮಿ  ಅಪಹರಣ ಪ್ರಕರಣ :ಸುಂಟಿಕೊಪ್ಪದಲ್ಲಿ ಕಿಡ್ನಾಪರ್ಸ್ ಗಳ ವಾಹನಕ್ಕೆ ತಡೆ: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಅಪರಿಚಿತ ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಅಪಹರಣ ಮಾಡಿದ್ದು, ಕಿಡ್ನಾಪರ್ ಗಳ ವಾಹನಕ್ಕೆ ಸುಂಟಿಕೊಪ್ಪದಲ್ಲಿ ತಡೆಯೊಡ್ಡಲಾಗಿದೆ ಎಂಬ ವರದಿ ಕೇಳಿ ಬರುತ್ತಿದೆ.
ಇತ್ತೀಚಿನ ಮಾಹಿತಿಯಂತೆ, ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಸುಂಟಿಕೊಪ್ಪ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!