ಸಂಪ್ಯ:ಅಪಾಯಕಾರಿ ಮರದ ಗೆಲ್ಲು ತೆರವು ಮಾಡಲು ಶಾಸಕರ ಸೂಚನೆ

ಪುತ್ತೂರು: ಮಾಣಿ- ಮೈಸೂರು ರಾ.ಹೆದ್ದಾರಿ 275 ರ ಸಂಪ್ಯದಲ್ಲಿ ಭಾರೀ ಗಾತ್ರದ ಮರದ ಗೆಲ್ಲೊಂದು ಅಪಾಯಕಾರಿಯಾಗಿದ್ದು ಅದನ್ನು ತಕ್ಷಣ ತೆರವು ಮಾಡುವಂತೆ ಶಾಸಕರಾದ ಅಶೋಕ್ ರೈ ಯವರು ಅರಣ್ಯ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ.
ಮರದ ಗೆಲ್ಲು ಅಪಾಯಕಾರಿಯಾಗಿದೆ ಎಂದು ಸಾರ್ವವಜನಿಕರು ಶಾಸಕರಿಗೆ ಕರೆ ಮಾಡಿ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಶಾಸಕರು ವೀಕ್ಷಣೆ ಮಾಡಿ ಮರದ ಗೆಲ್ಲು ತೆರವು ಮಾಡುವಂತೆ ಸೂಚನೆ ನೀಡಿದರು.