ಕರಾವಳಿ

ಸವಣೂರು: ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್’ನ ಲಾಂಛನ ಬಿಡುಗಡೆ



ಪುತ್ತೂರು: ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಸವಣೂರು ಇದರ ಲಾಂಛನ ಬಿಡುಗಡೆ ಕಾರ್ಯಕ್ರಮ ಸವಣೂರು ಸಹಲ್ ಕಾಂಪ್ಲೆಕ್ಸ್ ನಲ್ಲಿರುವ ಸಮಿತಿಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಾಬಿರ್ ಫೈಝಿಯವರು ದುವಾದ ಮೂಲಕ ನೆರೆವೇರಿಸಿದರು. ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷರಾದ ಖಾದರ್ ಹಾಜಿ ಸವಣೂರು ಅಧ್ಯಕ್ಷತೆ ವಹಿಸಿದ್ದರು. ಈಡನ್ ಗ್ಲೋಬಲ್ ಸ್ಕೂಲ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು ಲಾಂಛನ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಈಡನ್ ಗ್ಲೋಬಲ್ ಸ್ಕೂಲ್ ನ ಕಾರ್ಯದರ್ಶಿ ಬಶೀರ್ ಚೆಡವು, ಸವಣೂರು ಗ್ರಾ.ಪಂ ಸದಸ್ಯರದ ಅಬ್ದುಲ್ ರಜಾಕ್ ಕೆನರಾ, ರಫೀಕ್ ಎಂ.ಎ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಷನ್ ಇದರ ಉಪಾಧ್ಯಕ್ಷ ಬಶೀರ್ ಕಾಯರ್ಗ, ಸವಣೂರು ಯೂತ್ ಫ್ರೆಂಡ್ಸ್ ಇದರ ಅಧ್ಯಕ್ಷ ಯಾಕೂಬ್ ಸವಣೂರು, ಲೈಫ್ ಕೇರ್ ಮೆಡಿಕಲ್ ಇದರ ಮಾಲಕ ರಜಾಕ್ ಚಾಪಲ್ಲ, ಸಿದ್ದೀಕ್ ಆರಿಗಮಜಲು, ಪಟ್ಟೆಕಾರ್ಸ್ ಇದರ ಮಾಲಕ ಸವಾದ್ ಪಟ್ಟೆ ಭಾಗವಹಿಸಿದರು. ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಫೀಕ್ ಟಾಸ್ಕೊ ಸ್ವಾಗತಿಸಿದರು. ಸಫ್ವಾನ್ ಸವಣೂರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!