ಕರಾವಳಿ

ಸುಳ್ಯ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ಸಾರಿಯಾ ವಾರ್ಷಿಕ ಸ್ವಲಾತ್ ಮಜ್ಲಿಸ್ ಸಂಪನ್ನ



ಸುಳ್ಯ ನಾವೂರಿನಲ್ಲಿ ಕಾರ್ಯಚರಿಸುತ್ತಿರುವ ಅನ್ಸಾರಿಯಾ ಎಜುಕೇಶನಲ್ ಸೆಂಟರ್ ನಲ್ಲಿ 21ನೇ ವಾರ್ಷಿಕ ಸ್ವಲಾತ್ ಮಜ್ಲೀಸ್ 4 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 5ರಂದು ಸಂಪನ್ನಗೊಂಡಿತು.


ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 2 ರಂದು ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಉಮರ ನೇತಾರರ ಉಮಾರಾ ಮೀಟ್ ಕಾರ್ಯಕ್ರಮ ನಡೆದು ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯಿತು.


ಅಂದು ಸಂಜೆ ಕಾಸರಗೋಡು ಮೂಲದ ಖ್ಯಾತ ಪಂಡಿತರಿಂದ ಬುರ್ದಾ ಮಜ್ಲೀಸ್ ಹಾಗೂ ಇಶಲ್ ವಿರುನ್ನು ಕಾರ್ಯಕ್ರಮ ನಡೆದು
ಡಿಸೆಂಬರ್ 3 ಮತ್ತು 4ರಂದು ದಅವ ಮದರಸ ಹಾಗೂ ಹಿಫ್ಲ್ ವಿದ್ಯಾರ್ಥಿಗಳ ಕಲಾಸ್ಪರ್ಧೆ, ಮತ್ತು ಮತಅಲ್ಲಿಮ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.
ಸ್ಪರ್ದೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.


ಡಿಸೆಂಬರ್ 5 ಸಮಾರೋಪ ಸಮಾರಂಭದಂದು ಸುಳ್ಯದ ಇತಿಹಾಸದಲ್ಲಿ ಪ್ರಥಮವಾಗಿ ಮಹಿಳಾ ಶರೀತ್ ಕಾಲೇಜಿನ ನಾಲಕ್ಕು ವಿದ್ಯಾರ್ಥಿಗಳಿಗೆ ನುಸ್ರಿಯ ಸನದ್ ಬಿರುದು ನೀಡಿಗೌರವಿಸಲಾಯಿತು.
ಸಂಜೆ ಏಳು ಗಂಟೆಗೆ 21ನೇ ವಾರ್ಷಿಕ ಸ್ವಲಾತ್ ಮಜ್ಲೀಸ್ ಮತ್ತು ಸಾಮೂಹಿಕ ಪ್ರಾರ್ಥನಾ ಸಂಗಮ ಅಸ್ಸಯ್ಯದ್ ಫಜಲ್ ಕೊಯಮ್ಮ ತಂಗಳ್ ರವರ ನೇತೃತ್ವದಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಅನ್ಸಾರಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ದೃಷ್ಟಿಯಿಂದ ನೂತನವಾಗಿ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ಅಸ್ಸಯ್ಯದ್ ಕೂರ ತಂಙಳ್ ನೆರವೇರಿಸಿದರು. ಉದ್ಯಮಿ ಫೈಸಲ್ ಕಟ್ಟೆಕಾರ್ಸ್ ರವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಈ ತರಗತಿಯನ್ನು ನಿರ್ಮಿಸಲಾಗಿತ್ತು.
ಈ ಸಂಸ್ಥೆಗೆ ಹಲವಾರು ವರ್ಷಗಳಿಂದ ವಿವಿದ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಹಕರಿಸಿದ ಎ ಬಿ ಹಸ್ಸನುಲ್ ಫೈಝಿ ಅಜ್ಜಾವರ, ಇಬ್ರಾಹಿಂ ಫೈಝಿ ಪೈಚಾರು, ಬಿ ಎಂ ಅಬೂಬಕ್ಕರ್ ಹಾಜಿ, ಹಾಜಿ ಬಿಕೆ ಅಬ್ದುಲ್ ಖಾದರ್ ಕಲ್ಲಪಳ್ಳಿ ಈ ನಾಲ್ವರು ಪ್ರಮುಖರನ್ನು ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.


ಸಭಾ ವೇದಿಕೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು.
ವೇದಿಕೆಯಲ್ಲಿ ಅಸ್ಸಯ್ಯದ್ ಕುಂಞಿ ಕೋಯ ಸಹದಿ ತಂಙಳ್, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫ ಜನತಾ, ಸಂಸ್ಥೆಯ ಕೋಶಾಧಿಕಾರಿ ಆದಮ್ ಹಾಜಿ ಕಮ್ಮಾಡಿ, ಕಾರ್ಯದರ್ಶಿ ಲತೀಫ್ ಹರ್ಲಡ್ಕ,ಶರೀಹತ್ ಪ್ರಿನ್ಸಿಪಾಲ್ ಅಸ್ಸಯ್ಯದ್ ಪಾಷಾ ಮದನಿ, ಪ್ರಿನ್ಸಿಪಾಲ್ ಅಬೂಬಕ್ಕರ್ ಸಕಾಫಿ, ಅಬ್ದುಲ್ ಮಜೀದ್ ಸಖಾಫಿ, ಸದರ್ ಮುಅಲ್ಲಿಮ್ ನೌಶಾದ್ ಮದನಿ, ಮುದರ್ರಿಸ್ ಹಂಝತುಲ್ ಕರಾರ್ ಮುಹೀನಿ, ಸಲಹಾ ಸಮಿತಿ ಸದಸ್ಯರಾದ ಇಕ್ಬಾಲ್ ಎಲಿಮಲೆ, ಎಜುಕೇಶನಲ್ ಸಂಸ್ಥೆಯ ಉಸ್ತುವಾರಿ ಅಬ್ದುಲ್ ಹಮೀದ್ ಬೀಜಕೊಚ್ಚಿ, ಸದಸ್ಯರಾದ ಶರೀಫ್ ಕಂಠಿ, ಶಾಫಿ ಕುತ್ತಮಟ್ಟೆ, ಉದ್ಯಮಿ ಹಮೀದ್ ಕುತ್ತಮಟ್ಟೆ, ವಖ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ ಮೊದಲಾದವರು ಉಪಸ್ಥಿತರಿದ್ದರು.


ಖ್ಯಾತ ಪ್ರಭಾಷಣಕಾರ ಯಾಸಿರ್ ಸಖಾಫಿ ಅಲ್ ಅಝ್ಹರಿ ಕೇರಳ ಅವರಿಂದ ಧಾರ್ಮಿಕ ಪ್ರಭಾಷಣ ನಡೆಯಿತು.
ಸ್ಥಳೀಯ ಖತೀಬ್ ಉಮ್ಮರ್ ಮುಸ್ಲಿಯರ್ ಮರ್ದಾಳ ಸ್ವಾಗತಿಸಿ ಅಡ್ವಕೇಟ್ ಅಬ್ದುಲ್ಲ ಹಿಮಮಿ ಸಖಾಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!