ಅಳುತ್ತಿದೆ ಎಂದು ಕೋಪಗೊಂಡು 9 ತಿಂಗಳ ಮಗುವನ್ನು ಕೊಂದ ಪಾಪಿ ತಂದೆ..!
ತಂದೆಯೊಬ್ಬ ತನ್ನ 9 ತಿಂಗಳ ಮಗುವನ್ನು ಕೊಂದ ಆಘಾತಕಾರಿ ಘಟನೆ ಯಾದಗಿರಿ ತಾಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ವಾರದಿಯಾಗಿದೆ. ಕುಡಿದ ಮತ್ತಿನಲ್ಲಿ ಮಗಳನ್ನ ಕೊಂದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಾನು ಮದ್ಯ ಕುಡಿಯುತ್ತಿದ್ದಾಗ ಮಗಳು ಅಳುತ್ತಿದ್ದಕ್ಕೆ ಕೋಪಗೊಂಡಿದ್ದಾನೆ. ಬಳಿಕ ಸಿಟ್ಟಿನಲ್ಲಿ ಮಗಳ ಕುತ್ತಿಗೆಯಲ್ಲಿದ್ದ ದಾರ ಹಿಡಿದು ಮೇಲೆತ್ತಿದ್ದಾನೆ. ಹೀಗಾಗಿ ಹುಸಿರು ಗಟ್ಟಿ ಮಗು ಸಾವನ್ನಪ್ಪಿದೆ. ಪತ್ನಿ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋದಾಗ ನಡೆದ ಘಟನೆ ನಡೆದಿದೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ರಾಮು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.