ಮುಸ್ಲಿಂ ಕಾಲೇಜು ಸ್ಥಾಪನೆಗೆ ಬಿಡುವುದಿಲ್ಲ: ಪ್ರಮೋದ್ ಮುತಾಲಿಕ್
ಮುಸ್ಲಿಂ ಕಾಲೇಜು ಸ್ಥಾಪನೆಗೆ ಬಿಡುವುದಿಲ್ಲ, ಅದಕ್ಕಾಗಿ ನನ್ನ ಬಲಿದಾನವಾದರೂ ಪರವಾಗಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ 10 ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವ ಕ್ರಮವನ್ನು ಖಂಡಿಸಿದ ಅವರು, ನನ್ನ ಬಲಿದಾನವಾದರೂ ಸರಿ, ಮುಸ್ಲಿಮ್ ಕಾಲೇಜು ಸ್ಥಾಪನೆಗೆ ನಾನು ಒಪ್ಪಲಾರೆ. ಮುಸ್ಲಿಮ್ ಕಾಲೇಜು ಸ್ಥಾಪನೆಗೆ ನಾನು ವಿರೋಧ ಮಾಡುತ್ತೇನೆ. ಈ ಸಂಬಂಧ ಹೋರಾಟವನ್ನೂ ಮಾಡುತ್ತೇನೆ ಎಂದು ಮುತಾಲಿಕ್ ಹೇಳಿದರು.