ಕರಾವಳಿ

ಬೆಳ್ತಂಗಡಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳೆಯರಿಗೆ ಕರೆ ಮಾಡಿದ ಆಟೋ ಚಾಲಕ: ಕೆರೆಯಲ್ಲಿ ಹುಡುಕಾಟ

ಬೆಳ್ತಂಗಡಿ: ಆಟೊ ರಿಕ್ಷಾ ಚಾಲಕನೋರ್ವ ತನ್ನ ಗೆಳೆಯರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಆಟೊ ರಿಕ್ಷಾ ಚಾಲಕನಿಗಾಗಿ ಗುರುವಾಯನಕೆರೆಯ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿರುವ ಘಟನೆ ನ.30ರಂದು ಬೆಳಿಗ್ಗೆ ವರದಿಯಾಗಿದೆ.

ಬೆಳ್ತಂಗಡಿಯಲ್ಲಿ ರಿಕ್ಷಾ ಚಾಲಕಾನಾಗಿರುವ ಪ್ರವೀಣ್ ಪಿಂಟೊ ಎಂಬವರು ನ.30ರಂದು ಬೆಳಗ್ಗೆ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಹುಡುಕಾಟ ನಡೆಸಿದಾಗ ಗುರುವಾಯನಕೆರೆ ಕೆರೆಯ ಬದಿಯಲ್ಲಿ ಪ್ರವೀಣ್ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಲಭಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಕೆರೆಗೆ ಹಾರಿರಬಹುದೆಂದು ಶಂಕಿಸಿರುವ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಬೆಳಾಲಿನ ಶೌರ್ಯ ವಿಪತ್ತು ನಿರ್ಬಹಣಾ ಘಟಕದ ಸ್ವಯಂಸೇವಕರು ಕೆರೆಯಲ್ಲಿ ಹುಡುಕಾಟದಲ್ಲಿ ಆರಂಭಿಸಿದ್ದಾರೆ. ಆದರೆ ಇದುವರೆಗೆ ಪ್ರವೀಣ್ ಸುಳಿವು ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!