ಕರಾವಳಿ

ಎಸ್ಕೆಎಸ್ಸೆಸ್ಸೆಫ್ ಮೇನಾಲ ಯೂನಿಟ್ ವತಿಯಿಂದ ಮೇನಾಲ ಶಾಲೆಗೆ ಭಾಷಣ ಪೀಠ(ಪೋಡಿಯಂ) ಕೊಡುಗೆ





ಪುತ್ತೂರು: ಮೇನಾಲ ಸ.ಹಿ.ಉ.ಹಿ.ಪ್ರಾ.ಶಾಲೆಗೆ ಎಸ್ಕೆಎಸ್ಸೆಸ್ಸೆಫ್ ಮೇನಾಲ ಯೂನಿಟ್ ವತಿಯಿಂದ ಭಾಷಣ ಪೀಠ(ಪೋಡಿಯಂ)ವೊಂದನ್ನು ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ಸಮಾಜ ಸೇವಕ, ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನಿರ್ದೇಶಕರೂ ಆದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶಾಲಾ ಎಸ್.ಡಿ.ಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಶಿಹಾಬುದ್ದೀನ್ ಮುಸ್ಲಿಯಾರ್, ಎಸ್ಕೆಎಸ್ಸೆಸ್ಸೆಫ್  ಜಿಲ್ಲಾ ಉಪಾಧ್ಯಕ್ಷ ಕೆ.ಎಚ್ ಮುಹಮ್ಮದ್ ಹಾಜಿ, ನೆ.ಮುಡ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ರಾಮ ಮೇನಾಲ,  ಎಸ್‌ವೈಎಸ್ ಅಧ್ಯಕ್ಷ ಇ.ಪಿ ಮುಹಮ್ಮದ್ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾರಿಸ್ ಪಿ.ಎಸ್, ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಪ್ರ.ಕಾರ್ಯದರ್ಶಿ ರಹ್ಮಾನ್ ಮೇನಾಲ, ಬೂತ್ ಅಧ್ಯಕ್ಷ ಅಬ್ದುಲ್ ಲತೀಫ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಕೆ ಎಂ ಮುಹಮ್ಮದ್, ಲತೀಫ್ ಬಿ ಸಿ ನಗರ ಮುಹಮ್ಮದ್ ಮುಸ್ಲಿಯಾರ್, ಮುಸ್ತಫಾ ಚೆಕ್ಕು, ಬಾತಿಷಾ ಮೇನಾಲ, ಮುಹಮ್ಮದ್ ದರ್ಕಾಸ್, ನಾಸಿರ್ ಆಟೋ ಹಾಗೂ ಎಸ್‌ಡಿಎಂಸಿ ಸಮಿತಿ ಪದಾಧಿಕಾರಿಗಳು, ಶಾಲಾ ಹಳೆವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅತಿಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.



ಅಬ್ದುಲ್ ಸಲಾಮ್ ಎಂ ಎ ಸ್ವಾಗತಿಸಿದರು. ಶಾಲಾ ಮುಖ್ಯಗುರು ರಾಜೀವಿ ಮತ್ತು ಅಧ್ಯಾಪಕ ವೃಂದದವರು ಕೊಡುಗೆಯನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ವಾಣಿಶ್ರೀ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!