ಕಬಕದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನ್ವರ್ ಇಬ್ರಾಹಿಂ ಈಗ ಮಲೇಷಿಯಾ ಪ್ರಧಾನಿ..!
ಪುತ್ತೂರು: ಕಳೆದ ಎರಡು ದಿನಗಳ ಹಿಂದೆ ಮಲೇಷಿಯಾದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡ ಪ್ರಧಾನಿಗೂ ಪುತ್ತೂರಿಗೂ ನಂಟಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ.
ಮಲೇಷಿಯಾಗೆ ನೂತನ ಪ್ರಧಾನಿಯಾಗಿ ಆಡಳಿತ ನಡೆಸಲಿರುವ ಅನ್ವರ್ ಇಬ್ರಾಹಿಮ್ ಅವರು ಪುತ್ತೂರಿನ ಕಬಕಕ್ಕೆ ಭೇಟಿ ನೀಡಿರುವುದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಕಬಕದ ಮೌಲಾನ ಕಾಟೇಜ್‌ನಲ್ಲಿ ನಡೆದ ಹಲ್ಕಾ ದ್ಝಿಕ್ರ್ (ಧಾರ್ಮಿಕ ಕಾರ್ಯಕ್ರಮ) ಕಾರ್ಯಕ್ರಮಕ್ಕೆ ಅಂದಿನ ಮಲೇಷಿಯಾದ ವಿರೋಧ ಪಕ್ಷದ ನಾಯಕರಾಗಿದ್ದ ಅನ್ವರ್ ಇಬ್ರಾಹಿಮ್ ರವರು ಅತಿಥಿಯಾಗಿ ಭಾಗವಹಿಸಿದ್ದರು ಎನ್ನಲಾಗುತ್ತಿದ್ದು ಆ ವೇಳೆ ಅವರು ದೇಶದ ಪ್ರಧಾನಿಯಾಗಬೇಕು ಎಂದು ಅಲ್ಲಿದ್ದ ಪ್ರಮುಖರು ಪ್ರಾರ್ಥಿಸಿದ್ದರು ಎನ್ನುವ ಸುದ್ದಿ ಹಬ್ಬಿದೆ.
ಒಟ್ಟಿನಲ್ಲಿ ಮಲೇಷಿಯಾದಲ್ಲಿ ವಿರೋಧ ಪಕ್ಷ ನಾಯಕ ಈಗ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಅವರ ಆಪ್ತ ವಲಯದಲ್ಲಿ ಸಂತಸ ಮನೆ ಮಾಡಿದೆ.