ರಾಜಕೀಯರಾಷ್ಟ್ರೀಯ

ಮಲೇಷಿಯಾದ ನೂತನ ಪ್ರಧಾನಿಗೆ ಪುತ್ತೂರಿಗೂ ಇರುವ ಆ ನಂಟು ಏನು?



ಪುತ್ತೂರು: ಕಳೆದ ಎರಡು ದಿನಗಳ ಹಿಂದೆ ಮಲೇಷಿಯಾದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡ ಪ್ರಧಾನಿಗೂ ಪುತ್ತೂರಿಗೂ ನಂಟಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ.

ಮಲೇಷಿಯಾಗೆ ನೂತನ ಪ್ರಧಾನಿಯಾಗಿ ಆಡಳಿತ ನಡೆಸಲಿರುವ ಅನ್ವರ್ ಇಬ್ರಾಹಿಮ್ ಅವರು ಪುತ್ತೂರಿನ ಕಬಕ ಎಂಬಲ್ಲಿಗೆ ಭೇಟಿ ನೀಡಿರುವುದು ವಾಟ್ಸಪ್ ಗುಂಪುಗಳಲ್ಲಿ ಹರಿದಾಡುತ್ತಿವೆ.

ಪುತ್ತೂರಿಗೆ ಮಲೇಷಿಯಾದ ನೂತನ ಪ್ರಧಾನಿ ಭೇಟಿ ಕಾರಣವೇನು?:
ಕಳೆದ ಹನ್ನೆರಡು ವರ್ಷಗಳ ಹಿಂದೆ ಕಬಕದ ಮೌಲಾನ ಕಾಟೇಜ್‌ನಲ್ಲಿ ನಡೆದ ಹಲ್ಕಾ ದ್ಝಿಕ್ರ್ (ಧಾರ್ಮಿಕ ಕಾರ್ಯಕ್ರಮ) ಕಾರ್ಯಕ್ರಮಕ್ಕೆ ಅಂದಿನ ಮಲೇಷಿಯಾದ ವಿರೋಧ ಪಕ್ಷದ ನಾಯಕರಾಗಿದ್ದ ಅನ್ವರ್ ಇಬ್ರಾಹಿಮ್ ರವರು ಅತಿಥಿಯಾಗಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ಈ ಕಾರಣದಿಂದ ಮಲೇಷಿಯಾದ ನೂತನ ಪ್ರಧಾನಿ ಪುತ್ತೂರಿಗೂ ಭೇಟಿ ನೀಡಿರುವುದು ವಿಶೇಷವಲ್ಲದೇ ಊರಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ಒಟ್ಟಿನಲ್ಲಿ ಮಲೇಷಿಯಾದಲ್ಲಿ ವಿರೋಧ ಪಕ್ಷ ನಾಯಕ ಈಗ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಅವರ ಆಪ್ತ ವಲಯದಲ್ಲಿ ಸಂತಸ ಮನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!