ಶರಾವತಿ ಹಿನ್ನೀರಿಗೆ ಜಾರಿದ ಬಸ್: ತಪ್ಪಿದ ಭಾರೀ ದುರಂತ
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಶರಾವತಿ ನೀರಿಗೆ ಇಳಿದಿರುವ ಘಟನೆ ನಡೆದಿದ್ದು, ಭಾರಿ ದುರಂತ ತಪ್ಪಿಹೋಗಿದೆ.
ಸಾಗರ ತಾಲೂಕು ಹೊಳೆ ಬಾಗಿಲಿನ ಹಿನ್ನೀರಿನಲ್ಲಿ ಸಿಗಂದೂರು ಕಡೆ ಹೊರಟಿದ್ದ ಬಸ್ ಲಾಂಚ್ ಗಾಗಿ ಕಾಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಇಳಿದಿದೆ.
ಇನ್ನು ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.
ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಮೇಲಕ್ಕೆತ್ತಲಾಗಿದೆ.