ಕ್ರೈಂಜಿಲ್ಲೆ

ಚೈತ್ರಾ ಕುಂದಾಪುರ ಮತ್ತು ಇತರರಿಗೆ ಅ.6ರ ವರೆಗೆ ನ್ಯಾಯಾಂಗ ಬಂಧನ



ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಸೇರಿ 7 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಬೆಂಗಳೂರಿನ 3 ನೇ ಎಪಿಎಂಸಿ ನ್ಯಾಯಾಲಯ ಅಕ್ಟೊಬರ್ 6 ರ ವರೆಗೆ ವಿಸ್ತರಿಸಿದೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ಮತ್ತು ಇತರ ಎಂಟು ಮಂದಿ ವಿರುದ್ಧ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚೈತ್ರಾ ಜತೆಗೆ ಇತರ ಪ್ರಮುಖ ಆರೋಪಿಗಳಾದ ಅಭಿನವ ಹಾಲಶ್ರೀ, ಶ್ರೀಕಾಂತ್, ಗಗನ್, ರಮೇಶ್, ಪ್ರಜ್ವಲ್ ಮತ್ತು ಧನರಾಜ್ ಸಹಿತ 7 ಮಂದಿ ಆರೋಪಿಗಳನ್ನು ಸೆಪ್ಟೆಂಬರ್ 13 ರಂದು ನ್ಯಾಯಾಲಯ 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪೊಲೀಸ್‌ ಕಸ್ಟಡಿ ಅಂತ್ಯಗೊಂಡ ಕಾರಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!