ಜಿಲ್ಲೆ

ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ



ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದ ಮಹಿಳೆ ವಾಪಾಸು ಬಾರದೇ ನಾಪತ್ತೆಯಾಗಿರುವ ಘಟನೆ ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂನಲ್ಲಿ ನಡೆದಿದೆ.

ನ.13ರಂದು ಬೆಳಗ್ಗೆ 6.30ರ ಸುಮಾರಿಗೆ ನಾಪತ್ತೆಯಾದ ಮಹಿಳೆ ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂ ನಿವಾಸಿ ರೂಪಾ ಎಂದು ತಿಳಿದುಬಂದಿದೆ.

ಇವರ ಚಹರೆ ಇಂತಿದೆ;
5 ಅಡಿ 1 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ನೇಪಾಳಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820-2537999, ಮೊ.ನಂ.: 9480805447, ಉಡುಪಿ ವೃತ್ತ ನಿರೀಕ್ಷಕರ ಕಚೇರಿ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!