Uncategorized

ಕೇರಳ: ಮೊಬೈಲ್’ನಲ್ಲಿ ಚಾಟಿಂಗ್ ಮಾಡುತ್ತಾ ಬಸ್ ಡ್ರೈವಿಂಗ್: ಚಾಲಕ ಅರೆಸ್ಟ್



ಕೊಚ್ಚಿ: ಡ್ರೈವಿಂಗ್ ಮಾಡುತ್ತಾ ಮೊಬೈಲ್ ಚಾಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಖಾಸಗಿ ಬಸ್ ಚಾಲಕನನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ವಶಕ್ಕೆ ಪಡೆದಿದೆ.

ಅಲುವಾ ಮತ್ತು ಥೀವರಾ ಮಾರ್ಗದ ನಡುವೆ ಸಂಚರಿಸುತ್ತಿದ್ದ ಖಾಸಗಿ ಬಸ್​ನಲ್ಲಿ ಚಾಲಕ ರುಬೀಶ್​ ಮೊಬೈಲ್​ನಲ್ಲಿ ಚಾಟಿಂಗ್​ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಪ್ರಯಾಣಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್​ ಆಗುತ್ತಿದ್ದಂತೆ ಚಾಲಕ ರುಬೀಶ್​ನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಬಸ್​ ಸಹ ಸೀಜ್​ ಮಾಡಲಾಗಿದ್ದು, ಸ್ಪೀಡ್​ ಗವರ್ನರ್ ಕಡಿತ ಸೇರಿದಂತೆ​ ಅನೇಕ ಗಂಭೀರ ಸ್ವರೂಪದ ಸಂಚಾರ ನಿಯಮ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿದೆ.

ಡ್ರೈವಿಂಗ್​ ಮಾಡುವಾಗ ಮೊಬೈಲ್​ ಬಳಕೆ ಕಾನೂನಿಗೆ ವಿರುದ್ಧವಾಗಿದೆ. ಭಾರತದಲ್ಲಿ ಬಹುತೇಕರು ಡ್ರೈವಿಂಗ್​ ಮಾಡುವಾಗ ಅಥವಾ ಇನ್ನಿತರ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!