ಮಗುವಿನೊಂದಿಗೆ ಮಹಿಳೆ ನಾಪತ್ತೆ
![](http://newsbites.in/wp-content/uploads/2022/11/IMG_20221114_120324.jpg)
ವಿವಾಹಿತ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಉಡುಪಿ ಹೂಡೆ ಎಂಬಲ್ಲಿ ನಡೆದಿದೆ.
ಹೂಡೆಯ ನಿವಾಸಿ ಝುಬೈರ್ ಎಂಬವರ ಪತ್ನಿ ಅನ್ಸಿಯಾ ಹಾಗೂ ಅವರ ಒಂದು ವರ್ಷದ ಹೆಣ್ಣು ಮಗು ಅಜೀನ್ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.
ಆನ್ಸಿಯಾ ನ.7ರಂದು ತನ್ನ ಮಗುವಿನೊಂದಿಗೆ ಹೈರಿಚ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು ಸಂಜೆ 5 ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.