ಕ್ರೈಂರಾಷ್ಟ್ರೀಯ

ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ



ಕಾರು ಪ್ರಪಾತಕ್ಕೆ ಉರುಳಿ ಯುವತಿಯೊಬ್ಬಳು ದಾರುಣ ಸಾವನ್ನಪ್ಪಿದ್ದಾರೆ. ರೀಲ್ಸ್ ಮಾಡಲು ಹೋಗಿ 25 ವರ್ಷದ ಯುವತಿ ಬಲಿಯಾಗಿದ್ದಾಳೆ. ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದಲ್ಲಿ ಘಟನೆ ನಡೆದಿದೆ.

ಶ್ವೇತಾ (25ವ) ಮೃತ ದುರ್ದೈವಿ. ಶ್ವೇತಾ ತನ್ನ ಮೂವರು ಸ್ನೇಹಿತರ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಪ್ರವಾಸಕ್ಕೆ ತೆರಳಿದ್ದಳು. ಈ ವೇಳೆ ಬೆಟ್ಟದ ತುದಿಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡುತ್ತಿದ್ದಳು. ಕಾರಿನೊಳಗೆ ಕುಳಿತ ಶ್ವೇತಾ ರಿವರ್ಸ್ ಗೇರ್‌ನಲ್ಲಿದ್ದ ಕಾರನ್ನು ಚಲಾಯಿಸಿದ್ದಾಳೆ. ಈ ವೇಳೆ ಏಕಾಏಕಿ ಜೋರಾಗಿ ಎಕ್ಸಿಲೇಟರ್‌ ಹೊತ್ತಿದ್ದಾಳೆ.  ನೋಡ ನೋಡುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಯುವತಿ ಕಾರು ಸಮೇತ ಪ್ರಪಾತಕ್ಕೆ ಬಿದ್ದಿದ್ದಾಳೆ. ಪ್ರಪಾತಕ್ಕೆ ಬಿದ್ದ ರಭಸಕ್ಕೆ ಕಾರು ಛಿದ್ರ ಛಿದ್ರವಾಗಿದ್ದರೆ ಶ್ವೇತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಲೈವ್ ಘಟನೆ ಸಾಮಾಜಿಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!