ಕುಂಬ್ರ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ರಫೀಕ್ ಅಲ್ ರಾಯ ಆಯ್ಕೆ: ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈ, ಕೋಶಾಧಿಕಾರಿಯಾಗಿ ಸಂಶುದ್ದೀನ್ ಎ. ಆರ್
ಪುತ್ತೂರು: ಕುಂಬ್ರ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ರಫೀಕ್ ಅಲ್ ರಾಯ ಆಯ್ಕೆಯಾಗಿದ್ದಾರೆ.
ನ. 8ರಂದು ಕುಂಬ್ರದಲ್ಲಿ ನಡೆದ ವರ್ತಕರ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ರೈ, ಕೋಶಾಧಿಕಾರಿಯಾಗಿ ಸಂಶುದ್ದೀನ್ ಎ. ಆರ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಉದಯ ಆಚಾರ್ಯ ಹಾಗೂ ರಮ್ಯಶ್ರೀ, ಜೊತೆ ಕಾರ್ಯದರ್ಶಿಯಾಗಿ
ಚರಿತ್ ಕುಮಾರ್ ಹಾಗೂ ರೇಷ್ಮಾ ಮೆಲ್ವಿನ್ ಆಯ್ಕೆಯಾದರು.
ಅಲ್ಲದೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವರ್ತಕರ ಸಂಘದ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ದುರ್ಗಾಪ್ರಸಾದ್ ರೈ ಕುಂಬ್ರ, ಚಂದ್ರಕಾಂತ್ ಶಾಂತಿವನ, ಸ್ಥಾಪಕಾಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ, ನಿರ್ಗಮನ ಅಧ್ಯಕ್ಷ ಮಾಧವ ರೈ ಕುಂಬ್ರ, ನಿರ್ಗಮನ ಪ್ರಧಾನ ಕಾರ್ಯದರ್ಶಿ ಅಝರ್ ಶಾ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.