29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಂಧನ
29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಟಾಟಾನಗರ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಆಕೆಯ ಬಳಿಯಿದ್ದ ವಿಷಕಾರಿ ಹಾವುಗಳು, ಹಲ್ಲಿಗಳು ಮತ್ತು ವಿದೇಶಿ ತಳಿಯ ಕೀಟಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ.6ರಂದು ರಾತ್ರಿ ದೆಹಲಿಗೆ ತೆರಳುವ ನೀಲಾಂಚಲ್ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಆರ್‌ಪಿಎಫ್ ಸಿಬ್ಬಂದಿ ಶೋಧ ನಡೆಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಹಾವುಗಳು, ಹಲ್ಲಿಗಳು, ಮತ್ತು ಕೀಟಗಳನ್ನು ವಶಪಡಿಸಿಕೊಂಡರು. ವಿದೇಶಿ ತಳಿಯ 29 ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳಲ್ಲಿ ಮೂರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲಾ 25 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಗೂಗಲ್ ಸರ್ಚ್‌ನಿಂದ ತಿಳಿದು ಬಂದಿದೆ.
ವಶಪಡಿಸಿಕೊಂಡ ಹಲ್ಲಿಗಳ ಬೆಲೆ 10,000 ದಿಂದ 20,000 ರೂ. ಆಗಿದೆ . ಮಣೆ ಮೂಲದ 52 ವರ್ಷದ ಮಹಿಳೆ ನಾಗಾಲ್ಯಾಂಡ್‌ನಿಂದ ಸರೀಸೃಪಗಳು, ಹಲ್ಲಿಗಳು ಮತ್ತು ಕೀಟಗಳನ್ನು ಸಂಗ್ರಹಿಸಿದ್ದಾಳೆ. ಎಂದು ಹೇಳಿದ್ದು, ನಂತರ ಆಕೆ ದಿಮಾಪೂರ್‌ಗೆ ಪ್ರಯಾಣ ಬೆಳೆಸಿ ಅಲ್ಲಿಂದ ದೆಹಲಿಗೆ ರೈಲು ಹಿಡಿಯಲು ಖರಗ್‌ಪುರ ಬಳಿಯ ಹಿಜ್ಜೆ ತಲುಪಿದಳು ಎಂದು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಹಾವುಗಳು ವಿಷಕಾರಿಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಉರಗತಜ್ಞರನ್ನು ಕರೆಸಲಾಗಿದ್ದು, ದೃಢೀಕರಣದ ಮೇರೆಗೆ ಅವೆಲ್ಲವನ್ನೂ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.