ಕರಾವಳಿ

ಸುಳ್ಯ: ಈದ್ ಮಿಲಾದ್ ಅಂಗವಾಗಿ ಮದರಸ ವಿದ್ಯಾರ್ಥಿಗಳ ಮಿಲಾದ್ ಕಂಝ್ಯೋಲಿಯಮ್ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ: ಈದ್ ಮಿಲಾದ್ ಆಚರಣೆಯ ಅಂಗವಾಗಿ ಗಾಂಧಿನಗರ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ಇದರ ಆಶ್ರಯದಲ್ಲಿ ಮುನವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ವಿದ್ಯಾರ್ಥಿಗಳ ಕಂಝ್ಯೋಲಿಯಂ ಸಾಂಸ್ಕೃತಿಕ ಕಾರ್ಯಕ್ರಮದ ಸ್ಪರ್ಧಾ ಕಾರ್ಯಕ್ರಮಕ್ಕೆ ಮದರಸ ಸಭಾಂಗಣದಲ್ಲಿ ಇಂದು ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮದರಸ ಸದರ್ ಮೊಅಲ್ಲಿಮ್ ಇಬ್ರಾಹಿಂ ಸಕಾಫಿ ಪುಂಡೂರು ವಹಿಸಿದ್ದರು. ಜೈನುಲ್ ಆಭಿದೀನ್ ತಂಗಳ್ ಜಯನಗರ ಪ್ರಾರ್ಥನೆ ನಿರ್ವಹಿಸಿದರು.
ಸ್ಥಳೀಯ ಮಸೀದಿ ಮುದರ್ರಿಸ್ ಸರಫುದ್ದೀನ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗಾಂಧಿನಗರ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ ಜನತಾ, ಮುಖಂಡರುಗಳಾದ ಅಬ್ದುಲ್ ಹಮೀದ್ ಬೀಜ ಕೊಚ್ಚಿ, ಕೆಬಿ ಅಬ್ದುಲ್ ಮಜೀದ್, ಹಾಜಿ ಮೊಹಿದೀನ್ ಫ್ಯಾನ್ಸಿ, ಇಬ್ರಾಹಿಂ ಶಿಲ್ಪಾ, ಎಸ್ ಪಿ ಅಬೂಬಕ್ಕರ್, ಎಸ್ ಎಮ್ ಹಮೀದ್, ಹಾಗೂ ಸಮಿತಿ ಪದಾಧಿಕಾರಿಗಳು, ಮದರಸ ಅಧ್ಯಾಪಕರುಗಳು ಉಪಸ್ಥಿತರಿದ್ದರು.


ಈ ಸ್ಪರ್ಧಾ ಕಾರ್ಯಕ್ರಮ ಇಂದು(ಅ.4) ಮತ್ತು ನಾಳೆ ನಡೆಯಲಿದ್ದು ಸುಮಾರು 600 ವಿದ್ಯಾರ್ಥಿಗಳಿಂದ 125ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮದರಸ ಅಧ್ಯಾಪಕರಾದ ಲತೀಫ್ ಸಕಾಫಿ ಗೂನಡ್ಕ ಸ್ವಾಗತಿಸಿ, ಸಹಶಿಕ್ಷಕರು ಮತ್ತು ಸ್ಥಳೀಯರಾದ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!