ಕರಾವಳಿ

‘ಸಾರಥಿ ನಂಬರ್ ಒನ್‌’ ಆಟೋ ಚಾಲಕ ಮೋಂತು ಲೋಬೋ ನಿಧನಮಂಗಳೂರು : ಯಾವುದೇ ಅಪಘಾತವಿಲ್ಲದೇ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾ ಮಂಗಳೂರಿನಲ್ಲಿ ಸುರಕ್ಷಿತ ಆಟೋರಿಕ್ಷಾ ಚಾಲಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಗಳೂರಿನ ವೆಲೆನ್ಸಿಯಾ ನಿವಾಸಿ, ಸಾರಥಿ ನಂಬರ್ ಒನ್ ಎಂದೇ ಬಿರುದು ಪಡೆದಿದ್ದ 86ರ ಹರೆಯದ ಮೋಂತು ಲೋಬೋ ಇಂದು ವಿಧಿವಶರಾಗಿದ್ದಾರೆ.

ತನ್ನ ನಿಸ್ವಾರ್ಥ ಸೇವೆ ಹಾಗೂ ಸಮಾಜ ಸೇವೆ ಮೂಲಕ ಇವರು ಮಂಗಳೂರಿನಲ್ಲಿ ಜನಾನುರಾಗಿಯಾಗಿದ್ದರು. ಹಲವು ಸಂಘಸಂಸ್ಥೆಗಳು ಕೂಡಾ ಇವರನ್ನು ಸನ್ಮಾನಿಸಿದ್ದವು. ಅರ್ಧಶತಮಾನಕ್ಕಿಂತಲೂ ಹೆಚ್ಚು ಕಾಲ ಇವರು ಆಟೋರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿದ್ದರು.

ವಿಶೇಷ ಅಂದರೆ ಇವರು ತಮ್ಮ ಸೇವೆಯ ಅವಧಿಯಲ್ಲಿ ಒಂದೇ ಒಂದು ಬಾರಿ ತಮ್ಮ ವಾಹನವನ್ನು ಅಪಘಾತಕ್ಕೆ ಒಳಪಡಿಸಿಲ್ಲ . ಇವರ ವಿರುದ್ಧ ಒಂದು ಠಾಣೆಯಲ್ಲಿ ಕೂಡಾ ಪ್ರಕರಣ ಇಲ್ಲ.

2008ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ನಗರ ಸಾರಿಗೆ ಪ್ರಾಧಿಕಾರ ಇವರನ್ನು ಗೌರವಿಸಿತ್ತು. 1957ರಲ್ಲಿ ಇವರು ತನ್ನ ಚಾಲನಾ ಪರವಾನಗಿ ಪಡೆದಿದ್ದು. ಮಂಗಳೂರಿನಲ್ಲಿ ಮೊದಲ ಬಾರಿಗೆ ಚಾಲನಾ ಪರವಾನಗಿ ಪಡೆದ ಮೊದಲ ಆಟೋ ಚಾಲಕರು ಇವರಾಗಿದ್ದರು. ಭಾರತೀಯ ಮೋಟಾರು ವಾಹನ ಚಾಲಕರ ಕಾರ್ಮಿಕ ಸಂಘಟನೆ 2012ರಲ್ಲಿ ಇವರಿಗೆ ಸಾರಥಿ ನಂಬರ್ ಒನ್ ಎನ್ನುವ ಬಿರುದು ನೀಡಿ ಗೌರವಿಸಿತ್ತು.

Leave a Reply

Your email address will not be published. Required fields are marked *

error: Content is protected !!