ರಾಜಕೀಯರಾಜ್ಯ

ಬಿಜೆಪಿ ಶಾಸಕ ಈಶ್ವರಪ್ಪ ಅವರ ಫೋಟೊ ಹಾಕಿ ಕರೆನ್ಸಿ ನೋಟ್‌..!

ಬೆಂಗಳೂರು: ಬಿಜೆಪಿ ಶಾಸಕ ಈಶ್ವರಪ್ಪ ಅವರ ಫೋಟೊ ಹಾಕಿ ಕರೆನ್ಸಿ ನೋಟ್‌ವೊಂದನ್ನು ಸಿದ್ಧಪಡಿಸಿರುವ ರಾಜ್ಯ ಕಾಂಗ್ರೆಸ್‌, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ‘ಆಪರೇಷನ್‌ ಕಮಲ’ವನ್ನು ಗೇಲಿ ಮಾಡಿದೆ.

‘ಶಾಸಕ ಸಂಗಮೇಶ್‌ ಅವರಿಗೆ ನಾನು ನೀಡಿದ್ದು ₹500 ಕೋಟಿ ಆಫರ್‌’ ಎಂಬ ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈ ರೀತಿ ವ್ಯಂಗ್ಯ ಮಾಡಿದೆ.

‘ಸಿಎಂ ಹುದ್ದೆಗೆ ₹2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ ₹500 ಕೋಟಿ ಹೆಚ್ಚಲ್ಲ ಅಲ್ಲವೇ? ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ ₹500 ಕೋಟಿ ಎಣಿಸುವುದಕ್ಕಾ, 40 ಪರ್ಸೆಂಟ್‌ ಕಮಿಷನ್‌ನ ಲೂಟಿಯ ಹಣ ಎಣಿಸುವುದಕ್ಕಾ? ₹500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?’ ಎಂದೂ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!