ಜಿಲ್ಲೆ

ಮಂಗಳೂರು : ಬೆಂಗರೆಯಲ್ಲಿ 3 ಮೀನಿನ ಬೋಟ್ ಗಳಿಗೆ ಬೆಂಕಿ



ಮಂಗಳೂರು: ನಗರದ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ 3 ಬೋಟ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಲಂಗರು ಹಾಕಿದ್ದ ಹಲವು ಬೋಟ್‌ಗಳ ಪೈಕಿ ಒಂದು ಬೋಟ್‌ನಲ್ಲಿ ಬೆಂಕಿ ಆಕಸ್ಮಿಕವಾಗಿದೆ. ಪಕ್ಕದಲ್ಲಿದ್ದ ಎರಡು ಬೋಟ್‌ಗಳಿಗೂ ಬೆಂಕಿ ತಗುಲಿದ್ದು ಸಂಪೂರ್ಣ ‌ಆಹುತಿಯಾಗಿವೆ.

ಬೋಟ್‌ಗಳು ಲಕ್ಷದ್ವೀಪದ ಮಾಲಕರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಮುಸ್ಸಂಜೆಯವರೆಗೂ ಅಗ್ನಿಜ್ವಾಲೆಯೊಂದಿಗೆ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!