ಪರಮೇಶ್ ಮೇಸ್ತಾ ಪ್ರಕರಣದಲ್ಲಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ಕೈಜೋಡಿಸಿದೆ: ಪ್ರಮೋದ್ ಮುತಾಲಿಕ್
ಕಾರ್ಕಳ: ಪರಮೇಶ್ ಮೇಸ್ತಾ ಕೇಸು ಮುಚ್ಚಿಹಾಕಲಾಗಿದೆ.
ಹಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಗರು ಪರಮೇಶ್ ಮೇಸ್ತಾನ ಕೇಸು ಮುಚ್ಚಿ ಹಾಕುವಲ್ಲಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ಕೈಜೋಡಿಸಿದೆ. ಆ ಪ್ರಕರಣವು ಮರುತನಿಖೆ ನಡೆಸಿದರೆ ಸತ್ಯ ಸತ್ಯಾತೆಯೊಂದಿಗೆ ಪರಮೇಶ್‌ನ ಕೊಲೆ ಪ್ರಕರಣದಲ್ಲಿ ಭಾಗಿಗಳಾದ ಆರೋಪಿಗಳು ಜೈಲು ಸೇರುವುದು ಖಚಿತ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹೋಟೆಲ್ ಪ್ರಕಾಶ್‌ನ ಸಭಾಂಗಣದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದುತ್ವದ ಹೆಸರಿನಲ್ಲಿ ಬಹುತೇಕ ರಾಜ್ಯಗಳಲ್ಲಿ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಹಿಂದುತ್ವವೆಂದರೆ ತೀವ್ರ ಅಲರ್ಜಿ ಎಂದು ಹೇಳಿದರು.