ಪೆರುವಾಯಿಯಲ್ಲಿ ನಡೆದಿದ್ದ ರಸ್ತೆ ಅಪಘಾತ-ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತ್ಯು
ವಿಟ್ಲ: ಪೆರುವಾಯಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರಗೊಂಡಿದ್ದ ಮಹಿಳೆಯೋರ್ವರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.
ಸೀತಾ ಮಡಿವಾಳ ಮೃತಪಟ್ಟವರು ಕಳೆದ ತಿಂಗಳು ಪೆರುವಾಯಿ ಗ್ರಾಮದ ಅಡ್ಡದಲ್ಲಿ ನಡೆದಿದ್ದ ಬೈಕ್ ಅಪಘಾತದಲ್ಲಿ ಸೀತಾರವರು ಗಂಭೀರ ಗಾಯಗೊಂಡಿದ್ದರು. ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಸೀತಾರವರು ಕೊಳತ್ತಡ್ಕ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು ಎಂದು ಮಾಹಿತಿ ಲಭಿಸಿದೆ.