ಕರಾವಳಿರಾಜ್ಯ

ಎಸ್‌ಎಎಫ್ ಯಾವುದೇ ಪ್ರಕರಣ ದಾಖಲಿಸಿಲ್ಲ: ಪರಮೇಶ್ವರ್

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮುಗಲಭೆ ಮತ್ತು ಕೊಲೆಗಳು ನಡೆದಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದ್ದು ಅದನ್ನು ತಡೆಯಲು ವಿಶೇಷ ಕಾರ್ಯಪಡೆ (ಎಸ್‌ಎಎಫ್)  ಸ್ಥಾಪನೆ ಮಾಡಲಾಗಿದೆ, ಎಸ್‌ಎಎಫ್ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.



ಗುರುವಾರ ವಿಧಾನ ಪರಿಷತ್‌ನ ಪ್ರಶೋತ್ತರ ವೇಳೆ ಬಿಜೆಪಿ ಸದಸ್ಯ ಕಿಶೋರ್ ಕುಮಾ‌ರ್ ಪುತ್ತೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಪಡೆ ರಚನೆಯಾದ ನಂತರ ಇದುವರೆಗೆ ಯಾವ ಕೋಮು ಗಲಭೆಗಳು ನಡೆದಿಲ್ಲ, ಹೀಗಾಗಿ ಕಾರ್ಯಪಡೆಯು ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿಲ್ಲ. ಎಸ್‌ಎಎಫ್ ರಚನೆಯ ನಂತರ ಶಾಂತಿ ನೆಲೆಸಿದೆ ಎಂದರು.

ಕಾರ್ಯಪಡೆ ಶಾಶ್ವತವಾಗಿ ಇರಬೇಕು ಎಂದು ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ. ಎಲ್ಲಿಯವರೆಗೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತದೆಯೋ ಅಲ್ಲಿಯವರೆಗೆ ನಾವು ವಿಶೇಷ ಕಾರ್ಯ ಪಡೆಯನ್ನು ಇಡುತ್ತೇವೆ. ಗೋ ಹತ್ಯೆ ಮತ್ತು ಗೋ ಕಳ್ಳತನ ಮಾಡುವವರ ವಿರುದ್ಧ ಹಾಗೂ ಅನೈತಿಕ ಪೊಲೀಸ್‌ಗಿರಿ ಮಾಡುವವರ ವಿರುದ್ಧವೂ ವಿಶೇಷ ಕಾರ್ಯ ಪಡೆಯು ನಿಗಾವಹಿಸುತ್ತದೆ. ಏಕೆಂದರೆ ಈ ಕಾರಣ ಗಳಿಂದಲೂ ಕೋಮುಗಲಭೆ ಆಗಬಹುದು ಎಂದು ಪರಮೇಶ್ವರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!