ಕ್ರೀಡೆರಾಷ್ಟ್ರೀಯ

ಟಿ20 ಕ್ರಿಕೆಟ್ ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಿದ ಭಾರತ: ದೀಪಾವಳಿ ಶುರು ಎಂದ ಅಮಿತ್ ಶಾ



ನವದೆಹಲಿ: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಮೋಘ
ಗೆಲುವು ಸಾಧಿಸಿರುವ ಬಗ್ಗೆ ಸಂಭ್ರಮಿಸಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೀಪಾವಳಿ ಶುರು.. ಎಂದಿದ್ದಾರೆ.

ಟಿ–ಟ್ವೆಂಟಿಯ ವಿಶ್ವಕಪ್‌ಗೆ ಅದ್ಭುತ ಆರಂಭ, ಇಂತಹ ಉಡುಗೊರೆ ಮೂಲಕ ದೀಪಾವಳಿ ಹಬ್ಬ ಶುರುವಾಗಿದೆ. ವಿರಾಟ್ ಕೊಹ್ಲಿ ಅವರಿಂದ ಎಂತಹ ಅದ್ಭುತ ಇನ್ನಿಂಗ್ಸ್‌ ಎಂದು ಶಾ ಬಣ್ಣಿಸಿದ್ದಾರೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.

Leave a Reply

Your email address will not be published. Required fields are marked *

error: Content is protected !!