ರಾಜ್ಯ

ಅಂತರರಾಜ್ಯ ಜಲ ವಿವಾದ ಕಾಯ್ದೆ ಅಪ್ರಸ್ತುತ- ಸಿ.ಎಂ ಬೊಮ್ಮಾಯಿ

ಹೊಸದುರ್ಗ: ‘ಅಂತರರಾಜ್ಯ ಜಲ ವಿವಾದ ಕಾಯ್ದೆ ಅಪ್ರಸ್ತುತವಾಗಿದೆ. ಇದು ಸಮಸ್ಯೆ ಇತ್ಯರ್ಥಪಡಿಸುವ ಬದಲು ಹಲವು ಪ್ರಕರಣಗಳಿಗೆ ಕಾರಣವಾಗಿದೆ. ನ್ಯಾಯಾಧೀಕರಣ ರಚನೆ ಮಾಡಿ ಜಲವಿವಾದವನ್ನು ಇನ್ನಷ್ಟು ಕಗ್ಗಂಟು ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಹೊಸದುರ್ಗ ನ್ಯಾಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಲ ಬದಲಾದಂತೆ ಹಲವು ಕಾನೂನುಗಳು ಅಪ್ರಸ್ತುತವಾಗಿವೆ. ಇಂತಹ ಕಾನೂನುಗಳನ್ನು ಗುರುತಿಸಿ ಬದಲಾವಣೆ ತರುವ ಅಗತ್ಯವಿದೆ. ಕ್ಲಿಷ್ಟಕರ ವ್ಯವಸ್ಥೆಯ ನಡುವೆ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಾನೂನುಗಳಲ್ಲಿ ಬದಲಾವಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ’ ಎಂದರು

Leave a Reply

Your email address will not be published. Required fields are marked *

error: Content is protected !!