ಪಾಪೆತ್ತಡ್ಕದ ಮಹಮ್ಮದ್ ಸಂಪ್ಯದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ
ಪುತ್ತೂರು: ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪ್ಯದಲ್ಲಿ ವರದಿಯಾಗಿದೆ.

ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಟೋ ಚಾಲಕ ಮಹಮ್ಮದ್ ಮಮ್ಮು (46 ವ.) ಜು.6ರಂದು ಮಧ್ಯಾಹ್ನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಪುರುಷರಕಟ್ಟೆ ಸಮೀಪದ ಪಾಪೆತ್ತಡ್ಕ ನಿವಾಸಿಯಾಗಿರುವ ಇವರು ಕಳೆದ ಕೆಲ ಸಮಯಗಳಿಂದ ಸಂಪ್ಯದಲ್ಲಿ ವಾಸವಾದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.