Uncategorized

ಮುಂಬೈನ ಲೋಕಲ್ ರೈಲಿನಲ್ಲಿ ಮೂವರು ಮಹಿಳೆಯರು ಜಗಳ – ವಿಡಿಯೋ ವೈರಲ್



ಮುಂಬೈ: ಮುಂಬೈನ ಲೋಕಲ್ ರೈಲಿನಲ್ಲಿ ಮೂವರು ಮಹಿಳೆಯರು ಜಗಳ ಮಾಡಿಕೊಂಡಿದ್ದು ಇದರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಮತ್ತೊಂದೆಡೆ, ಇತರ ಪ್ರಯಾಣಿಕರು ಇವರ ಜಗಳ ನಿಲ್ಲಿಸಲು ಮಧ್ಯಪ್ರವೇಶಿಸಲು ಯತ್ನಿಸಿದರೂ ಅದು ವಿಫಲವಾಗಿದೆ. ಮಹಿಳೆಯರ ಕಂಪಾರ್ಟ್‌ಮೆಂಟ್‌ ನಲ್ಲಿರುವ ಮೂವರು ಜಗಳದಲ್ಲಿ ತೊಡಗಿರುವ ವಿಡಿಯೋವನ್ನು ಪಕ್ಕದಲಿದ್ದ ಪ್ರಯಾಣಿಕರು ಸೆರೆ ಹಿಡಿದ್ದಾರೆ. ಇದರಲ್ಲಿ ಪರಸ್ಪರ ನಿಂದಿಸುವುದು, ಕಪಾಳ ಮೋಕ್ಷ ಮಾಡುವುದು ಮತ್ತು ಕೂದಲನ್ನು ಎಳೆದು ಪರಸ್ಪರ ಮಾರಾಮಾರಿ ಆದ ದೃಶ್ಯಗಳು ಕೂಡಾ ಇದೆ.
ಸದ್ಯ ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಾಂಬೆ ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!