ಅಬೂಬಕ್ಕರ್ ಕೋಳಿಗದ್ದೆ ಮನೆಗೆ ಶಾಸಕರ ಭೇಟಿ, ಕುಟುಂಬಕ್ಕೆ ಸಾಂತ್ವನ
ಪುತ್ತೂರು: ಅ.14 ರಂದು ನಿಧನರಾದ ಕುಂಬ್ರದ ಹಿರಿಯ ರಿಕ್ಷಾ ಚಾಲಕ ಕೋಳಿಗದ್ದೆ ನಿವಾಸಿ ಅಬೂಬಕ್ಕರ್ ಅವರ ಮನೆಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ಅಬೂಬಕ್ಕರ್ ರವರು ಪಕ್ಷದ ಏಳಿಗಾಗಿ ಶ್ರಮಿಸಿದ ಪ್ರಾಮಾಣಿಕ ಕಾರ್ಯಕರ್ತರಾಗಿದ್ದು ಅವರ ಅಗಲುವಿಕೆ ಪಕ್ಷಕ್ಕೆ ಹಾಗೂ ಸಮಾಜಕ್ಕೆ ಅಪಾರ ನಷ್ಟವುಂಟಾಗಿದೆ, ಕುಟುಂಬಕ್ಕೆ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶಾಸಕರು ಕಂಬನಿ ಮಿಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಕುಂಬ್ರ ಕೆಪಿಎಸ್ ಕಾಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಗುತ್ತಿಗೆದಾರ ಸಿಯಾನ್ ದರ್ಬೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.