ಕರಾವಳಿ

ಬಂಟ್ವಾಳ: ಕುತ್ತಿಗೆಗೆ ಹಗ್ಗ ಸಿಲುಕಿ 9 ವರ್ಷದ ಬಾಲಕ ಮೃತ್ಯು

ಬಂಟ್ವಾಳ: ಮನೆಯೊಳಗೆ ಆಟವಾಡುತ್ತಿದ್ದ 9 ವರ್ಷದ ಬಾಲಕನ ಕುತ್ತಿಗೆಗೆ ಕಿಟಕಿಯಲ್ಲಿದ್ದ ಹಗ್ಗ ಆಕಸ್ಮಿಕವಾಗಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರುವ ದುರ್ಘಟನೆ ಅ.25ರಂದು ನಡೆದಿದೆ.


ಬಂಟ್ವಾಳದ ಕುಕ್ಕಿಪಾಡಿ ನಿವಾಸಿ ಜಯಾನಂದ (42) ಅವರು ನೀಡಿದ ದೂರಿನ ಪ್ರಕಾರ, ಅವರ ಸಹೋದರ ಆನಂದ ಪೂಜಾರಿ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ತಮ್ಮ ಮನೆಯ ಸಮೀಪ ವಾಸವಾಗಿದ್ದಾರೆ.
ಅ.25ರಂದು ಆನಂದ ಪೂಜಾರಿ ಅವರ ಮನೆಯಿಂದ ಬೊಬ್ಬೆ ಕೇಳಿ ಜಯಾನಂದ ಅವರು ಅಲ್ಲಿಗೆ ತೆರಳಿ ನೋಡಿದಾಗ, ಆನಂದ ಪೂಜಾರಿ ಅವರ 9 ವರ್ಷದ ಮಗ ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಕಿಟಕಿಯಲ್ಲಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡು ಉಸಿರುಗಟ್ಟಿ ಯಾವುದೇ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದನು.



ಕೂಡಲೇ ಬಾಲಕನನ್ನು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026ರಂತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!