ರಾಷ್ಟ್ರೀಯ

ರೂಪಾಯಿ ಕುಸಿಯುತ್ತಿಲ್ಲ ಡಾಲರ್‌ ಬಲಗೊಳ್ಳುತ್ತಿದೆ…ಟ್ರೋಲ್ ಗೊಳಗಾದ ನಿರ್ಮಲಾ ಸೀತಾರಾಮನ್‌ ಹೇಳಿಕೆ



ಬೆಂಗಳೂರು: ‘ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್‌ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್‌ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ..

ಅಮೆರಿಕದಲ್ಲಿ ನಡೆದ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೀಡಿದ ಉತ್ತರವಿದು.

ನಿರ್ಮಲಾ ಅವರು ಅತ್ತ ಈ ಹೇಳಿಕೆ ನೀಡುತ್ತಲೇ, ಇತ್ತ ಅವರ ಹೇಳಿಕೆಗೆ ಸಂಬಂಧಿಸಿದಂತೆ ಟೀಕೆಗಳು ವ್ಯಕ್ತವಾಗಿವೆ. ಇನ್ನೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಮಲಾ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ. ಸಚಿವೆ ಹೇಳಿಕೆಯನ್ನು ವಿವಿಧ ಪ್ರಸಂಗಗಳಿಗೆ ಹೊಂದಿಸಿ ಗೇಲಿ ಮಾಡಲಾಗಿದೆ.

ಮೋದಿ ಜಿ ಅವರ ‘ಸ್ಕೂಲ್ ಆಫ್ ಲಾಜಿಕ್‌’ನ ಹೆಮ್ಮೆಯ ವಿದ್ಯಾರ್ಥಿ’ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ವಿಡಿಯೊವೊಂದನ್ನು ಹಂಚಿಕೊಂಡು ವ್ಯಂಗ್ಯವಾಡಿದೆ.

Leave a Reply

Your email address will not be published. Required fields are marked *

error: Content is protected !!